BengaluruCrime

ಮಾಜಿ ಮೇಯರ್‌ ಮನೆಯಲ್ಲಿ ಕೋಟ್ಯಂತರ ರೂಪಾಯಿ ಕಳ್ಳತನ!

ಬೆಂಗಳೂರು; ಬೆಂಗಳೂರಿನ ಮಾಜಿ ಮೇಯರ್‌ ಒಬ್ಬರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಕಳವಾಗಿದೆ.. ಮಾಜಿ ಮೇಯರ್‌ ಆರ್‌.ನಾರಾಯಣಸ್ವಾಮಿ ಅವರ ಸಂಜಯನಗರದ ಆರ್‌ಎಂವಿ ಎರಡನೇ ಹಂತದಲ್ಲಿರುವ ಮನೆಯಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಬೆಲೆಯ ವಸ್ತುಗಳು, ಹಣವನ್ನು ಕದ್ದು ಪರಾರಿಯಾಗಿದ್ದಾರೆ.. ಮನೆಯ ಸೆಕ್ಯೂರಿಟಿ ಗಾರ್ಡ್‌ ಈ ಕಳವು ಮಾಡಿದ್ದಾನೆ ಎನ್ನಲಾಗಿದೆ..

ಇದನ್ನೂ ಓದಿ; ಕೋಪ ಕಂಟ್ರೋಲ್‌ ಮಾಡಿಕೊಳ್ಳೋಕೆ ಆಗ್ತಿಲ್ವಾ..?; ಹಾಗಾದ್ರೆ ಹೀಗೆ ಮಾಡಿ ನೋಡಿ..

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳವು;

ಮಾಜಿ ಮೇಯರ್‌ ಆರ್‌.ನಾರಾಯಣಸ್ವಾಮಿ ಹಾಗೂ ಅವರ ಕುಟುಂಬದವರು ಹೊರಗಡೆ ಹೋಗಿದ್ದರು.. ಮನೆಯಲ್ಲಿ ಯಾರೂ ಇಲ್ಲದ್ದನ್ನೇ ಕಾಯುತ್ತಿದ್ದ ಮನೆ ಸೆಕ್ಯೂರಿಟಿ ಗಾರ್ಡ್‌ ನರಬಹದ್ದೂರ ಶಾಯಿ, ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾನೆ.. ಮನೆಯಲ್ಲಿರುವ ಲಾಕರ್‌ ಗಳನ್ನು ತೆಎದು, ಅದರಲ್ಲಿದ್ದ 4 ಲಕ್ಷ ರೂಪಾಯಿ ನಗದು, 1 ಕೋಟಿ ರೂಪಾಯಿ ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣ, 19 ಲಕ್ಷ ರೂಪಾಯಿ ಮೌಲ್ಯದ 22 ಕೆಜಿ ಬೆಳ್ಳಿಯ ವಸ್ತುಗಳು, ಬೆಲೆಬಾಳುವ ವಾಚ್‌ಗಳನ್ನು ಕಳವು ಮಾಡಲಾಗಿದೆ..

ಇದನ್ನೂ ಓದಿ; ರಾಜ್ಯದ ಹಲವೆಡೆ ವರುಣನ ಸಿಂಚನ; ಗಾಳಿ ಸಹಿತ ಮಳೆಯ ಅಬ್ಬರ!

ಸೆಕ್ಯೂರಿಟಿ ಗಾರ್ಡ್‌ ವಿರುದ್ಧ ಕೇಸ್‌ ದಾಖಲು;

ಮನೆಯಲ್ಲಿ ಯಾರೂ ಇಲ್ಲದಾಗ ಸೆಕ್ಯೂರಿಟಿ ಗಾರ್ಡ್‌ ಈ ಕೆಲಸ ಮಾಡಿದ್ದಾನೆ.. ಆತ ಈಗ ಪರಾರಿಯಾಗಿದ್ದಾನೆ.. ಆತ ನಾಪತ್ತೆಯಾಗಿರುವುದರಿಂದ ಅವನ ವಿರುದ್ಧವೇ ಅನುಮಾನ ಬಂದಿದೆ.. ಹೀಗಾಗಿ ಮಾಜಿ ಮೇಯರ್‌ ನಾರಾಯಣಸ್ವಾಮಿಯವರು ಸಂಜಯ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

 

Share Post