ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಬೇಕೆ..?; ಹಾಗಾದರೆ ಹಣ ಉಳಿತಾಯ ಮಾಡಿ..
ಬೆಂಗಳೂರು; ತುಂಬಾ ಜನರ ನೆಮ್ಮದಿಯನ್ನು ಹಾಳು ಮಾಡೋದು ಹಣಕಾಸಿನ ಸಮಸ್ಯೆ.. ನೆಮ್ಮದಿ ಹಾಳಾಗೋದಕ್ಕೆ ನಾನಾ ಕಾರಣಗಳು, ನಾನಾ ಸಮಸ್ಯೆಗಳು ಕಾರಣವಾಗುತ್ತವಾದರೂ ಪ್ರಮುಖವಾದುದು ಹಣಕಾಸು.. ಹಣದ ಸಮಸ್ಯೆಯಿಂದಾಗಿ ಎಷ್ಟೋ ಜನರು ನೆಮ್ಮದಿಯಾಗಿ ನಿದ್ದೆಯೂ ಮಾಡೋದಿಲ್ಲ.. ಸಾಲದ ಸುಳಿಯಲ್ಲಿ ಸಿಲುಕಿದ್ದ ಮಾತ್ರ ಅವರ ಬದುಕ ನರಕವೇ ಆಗಿರುತ್ತದೆ..
ಅಂದಹಾಗೆ, ಎಲ್ಲರೂ ಕೂಡಾ ಒಂದಿಲ್ಲೊಂದು ಕೆಲಸ ಮಾಡುತ್ತಾರೆ.. ದುಡಿಮೆ ಇರುತ್ತದೆ.. ದುಡಿಯುವಾಗ ಬಹುತೇಕರು ಉಳಿತಾಯ ಮಾಡೋದಿಲ್ಲ.. ಬದುಕು ಯಾವಾಗಲೂ ಹೀಗೇ ಇರುತ್ತದೆ ಎಂದುಕೊಂಡಿರುತ್ತಾರೆ.. ಆದ್ರೆ ಬದುಕು ಯಾವಾಗಲೂ ನಾವಂದುಕೊಂಡಂತೆ ಇರೋದಿಲ್ಲ.. ಕಷ್ಟ, ನಷ್ಟಗಳನ್ನು ಅನುಭವಿಸುವ ಕಾಲ ಬರುತ್ತದೆ.. ಹೀಗಾಗಿಯೇ ಸಂಪಾದನೆ ಮಾಡುವ ಸಮಯದಲ್ಲಿ ಒಂದುಷ್ಟು ಭಾಗವನ್ನು ಉಳಿತಾಯ ಮಾಡಬೇಕು.. ಹಾಗೆ ಉಳಿತಾಯ ಮಾಡಿದ ಹಣವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಬೇಕು.. ಅದು ಕಷ್ಟ ಕಾಲದಲ್ಲಿ ನಮಗೆ ಸಹಾಯವಾಗುತ್ತದೆ.. ನಮ್ಮ ಕಷ್ಟವನ್ನು ದೂರ ಮಾಡುತ್ತದೆ.. ನಮಗೆ ಆಸರೆಯಾಗಿ ನಿಲ್ಲುತ್ತದೆ..
ಹೀಗೆ ದುಡಿದ ಹಣದಲ್ಲಿ ಸ್ವಲ್ಪವಾದರೂ ಹಣ ಉಳಿತಾಯ ಮಾಡುವವರು ರಾತ್ರಿಯಲ್ಲಿ ಚೆನ್ನಾಗಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಾರೆ ಅಂತ ಒಂದು ಅಧ್ಯಯನ ಹೇಳುತ್ತದೆ.. ಬ್ರಿಸ್ಟಲ್ ಯೂನಿವರ್ಸಿಟಿ ಅಧ್ಯಯನದಿಂದ ಈ ವಿಚಾರ ತಿಳಿದುಬಂದಿದೆ.. ಪ್ರತಿ ತಿಂಗಳ ಸ್ವಲ್ಪವಾದರೂ ಹಣ ಉಳಿತಾಯ ಮಾಡಬೇಕು. ಹಾಗೆ ಮಾಡುವುದರಿಂದ ಭವಿಷ್ಯತ್ತಿನ ಮೇಲೆ ಭರವಸೆ ಮೂಡುತ್ತದೆ.. ಬದುಕಿನ ಮೇಲೆ ಭರವಸೆ ಮೂಡಿದರೆ ಅವರಿಗೆ ಚೆನ್ನಾಗಿ ನಿದ್ರೆ ಬರುತ್ತದೆ. ಹೀಗಂತ ಬ್ರಿಸ್ಟಲ್ ಯೂನಿವರ್ಸಿಟಿ ಅಧ್ಯಯನ ತಂಡ ಹೇಳಿದೆ..
ಯಾಕ್ಟ್ ಆಫ್ ಸೇವಿಂಗ್ಸ್ ವಿಚಾರದ ಮೇಲೆ ಈ ಸಂಶೋಧನೆ ಮಾಡಿದ್ದಾರೆ.. ಇದರ ಪ್ರಕಾರ, ಸೇವಿಂಗ್ಸ್‌ಗೂ ಸ್ಲೀಪಿಂಗ್‌ಗೂ ಸಂಬಂಧ ಇದೆ ಅನ್ನೋ ವಿಚಾರ ತಿಳಿದುಬಂದಿದೆ.. ಪ್ರತಿ ತಿಂಗಳೂ ಉಳಿತಾಯ ಮಾಡುವವರಲ್ಲಿ ಒಂದೇ ರೀತಿಯ ಸಂತೃಪ್ತಿ ಭಾವ ಇರುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ..