LifestyleNational

ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ಕಾಣಿಕೆ ಅರ್ಪಿಸಿದ ಮುಸ್ಲಿಂ ದಂಪತಿ

ತಿರುಪತಿ; ಇತ್ತೀಚೆಗೆ ಧಾರ್ಮಿಕ ಸಂಘರ್ಷಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಸಾಮರಸ್ಯ ಸಂದೇಶವನ್ನು ಮುಸ್ಲಿಂ ದಂಪತಿ ಸಾರಿದ್ದಾರೆ. ನಿನ್ನೆ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡಿದ್ದ ಮುಸ್ಲಿಂ ದಂಪತಿ, 1.2 ಕೋಟಿ ರೂಪಾಯಿ ಕಾಣಿಕೆ ಅರ್ಪಿಸಿದ್ದಾರೆ. 

ಚೆನ್ನೈನ ಮುಸ್ಲಿಂ ದಂಪತಿ ಅಬ್ದುಲ್ ಘನಿ ಮತ್ತು ನುಬಿನಾ ಬಾನು ನಿನ್ನೆ ತಿರುಮಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಟಿಟಿಡಿಗೆ 1.2 ಕೋಟಿ ರೂಪಾಯಿ ಮೊತ್ತದ ಚೆಕ್‌ ಹಸ್ತಾಂತರ ಮಾಡಿದ್ದಾರೆ.  ಈ ದಂಪತಿ ನೀಡಿದ ಹಣದಲ್ಲಿ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂ. ಮೀಸಲಿಡಲಾಗಿದೆ. ಉಳಿದ 87 ಲಕ್ಷ ರೂಪಾಯಿಯನ್ನು ಪದ್ಮಾವತಿ ಅತಿಥಿ ಗೃಹದ ಅಡುಗೆಮನೆಗೆ ಹೊಸ ಪೀಠೋಪಕರಣಗಳು ಮತ್ತು ಸಾಮಗ್ರಿಗಳಿಗಾಗಿ ನೀಡಲಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಿರುಪತಿ ತಿರುಮಲ ದೇವಸ್ಥಾನಕ್ಕೆ ಉದ್ಯಮಿ ಅಬ್ದುಲ್ ಘನಿ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ಅನ್ನು ಕೊಡುಗೆಯಾಗಿ ನೀಡಿದ್ದರು. ಈ ಹಿಂದೆ ತಿರುಪತಿ ದೇವಸ್ಥಾನಕ್ಕೆ ತರಕಾರಿಯನ್ನು ಸಾಗಿಸಲು 35 ಲಕ್ಷ ರೂ. ಮೌಲ್ಯದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.

Share Post