CinemaPolitics

Daali Dhananjay; ಡಾಲಿ ಧನಂಜಯ್‌ ಮೈಸೂರಿನಿಂದ ಲೋಕಸಭಾ ಅಖಾಡಕ್ಕೆ?

ಬೆಂಗಳೂರು; ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಫ್ಯಾನ್‌ ಫಾಲೋಯಿಂಗ್‌ ಪಡೆದುಕೊಂಡಿರುವ ನಟ ಡಾಲಿ ಧನಂಜಯ್‌.. ಇವರು ಸಿನಿಮಾ ಹೊರತುಪಡಿಸಿಯೂ ಒಂದು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.. ಯಾಕಂದ್ರೆ, ಡಾಲಿ ಧನಂಜಯ್‌, ಸಿನಿಮಾದ ಜೊತೆಜೊತೆಗೆ ಬಡವರ ಪರವಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುತ್ತಿರುತ್ತಾರೆ… ಸಮಾನತೆ ನಿಲುವು ಡಾಲಿ ಧನಂಜಯ್‌ ಅವರದ್ದು.. ಹೀಗಾಗಿ ಅವರು ಯಾವಾಗಲೂ ಕೂಡಾ ಕೋಮುವಾದ, ಕೋಮು ದ್ವೇಷ, ಜಾತಿವಾದದ ವಿರುದ್ಧ ಮಾತನಾಡುತ್ತಿರುತ್ತಾರೆ.. ಅವರ ಈ ನಿಲುವುಗಳನ್ನು ನೋಡಿದಾಗ ಯಾವಾಗಲಾದರೂ ಇವರು ರಾಜಕಾರಣಿಯಾಗಬಹುದು ಎಂದು ಹಲವು ಅಂದುಕೊಂಡಿದ್ದಿದೆ.. ಅದರಂತೆಯೇ ಡಾಲಿ ಧನಂಜಯ್‌ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ..

ಇದನ್ನೂ ಓದಿ; Back Pain; ಬೆನ್ನುನೋವು ಕಾಡುತ್ತಿದೆಯೇ..?; ನೀವು ಈ ತಪ್ಪು ಮಾಡುತ್ತಿದ್ದೀರಾ..?

ಮೈಸೂರಿನಿಂದ ಕಣಕ್ಕಿಳಿಯುತ್ತಾರಾ ಡಾಲಿ..?;

ಮೈಸೂರಿನಿಂದ ಕಣಕ್ಕಿಳಿಯುತ್ತಾರಾ ಡಾಲಿ..?; ಕೊಡುಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯತೀಂದ್ರ ಸಿದ್ದರಾಮಯ್ಯ ಹೆಸರು ಮೊದಲಿನಿಂದಲೂ ಕೇಳಿಬರುತ್ತಿತ್ತು… ಆದ್ರೆ ಇದೀಗ ಯತೀಂದ್ರ ಬದಲಾಗಿ ಡಾಲಿ ಧನಂಜಯ್‌ ಹೆಸರು ಬಲವಾಗಿ ಕೇಳಿಬರುತ್ತಿದೆ.. ಪ್ರತಾಪ ಸಿಂಹ ವಿರುದ್ಧ ಡಾಲಿ ಧನಂಜಯ್‌ ಗೆಲ್ಲಬಲ್ಲರು ಎಂಬ ವಾದ ಕೇಳಿಬರುತ್ತಿದ್ದು, ಕಾಂಗ್ರೆಸ್‌ ನಾಯಕರು ಡಾಲಿ ಧನಂಜಯ್‌ರನ್ನು ರಾಜಕೀಯಕ್ಕೆ ಕರೆತಂದು, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; YASH; ಬೆಳೆದು ಬಂದ ದಾರಿ ಮರೆಯದ ನಟ ಯಶ್‌; ಸ್ಟಾರ್‌ ಆದರೂ ಸರಳ ನಡೆ!

ಧನಂಜಯ್‌ರನ್ನು ಸಂಪರ್ಕಿಸಿದ ಕಾಂಗ್ರೆಸ್‌ ಮುಖಂಡರು;

ಧನಂಜಯ್‌ರನ್ನು ಸಂಪರ್ಕಿಸಿದ ಕಾಂಗ್ರೆಸ್‌ ಮುಖಂಡರು; ಡಾಲಿ ಧನಂಜಯ್‌ ಕೊಂಚ ಜಾತ್ಯತೀತ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದಾರೆ… ಬಲಪಂಥೀಯ ನಿಲುವುಗಳಿಗೆ ಅವರು ವಿರುದ್ಧವಾಗಿದ್ದಾರೆ.. ಅಂದರೆ ಬಿಜೆಪಿ ಸಿದ್ಧಾಂತಗಳನ್ನು ಅವರೂ ಯಾವಾಗಲೂ ಪರೋಕ್ಷವಾಗಿ ವಿರೋಧಿಸುತ್ತಾ ಬಂದಿದ್ದಾರೆ… ಕಾಂಗ್ರೆಸ್‌ ಪಕ್ಷದ ಕೆಲವು ಯೋಜನೆಗಳು, ಸಿದ್ದರಾಮಯ್ಯ ಅವರ ಕೆಲವು ನಿಲುವುಗಳನ್ನು ಅವರು ಸಪೋರ್ಟ್‌ ಮಾಡುತ್ತಾ ಬಂದಿದ್ದಾರೆ.. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಂತಹದ್ದೊಂದು ನಿಲುವನ್ನು ಡಾಲಿ ಧನಂಜಯ್‌ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್‌ ನಾಯಕರ ಜೊತೆ ಡಾಲಿ ಧನಂಜಯ್‌ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಕೆಲ ಕಾಂಗ್ರೆಸ್‌ ನಾಯಕರು ಡಾಲಿ ಧನಂಜಯ್‌ ಅವರನ್ನು ಸಂಪರ್ಕಿಸಿ ರಾಜಕೀಯಕ್ಕೆ ಬರುವಂತೆಯೂ, ಕೊಡಗು-ಮೈಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆಯೂ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Guava Leaves; ಸೀಬೆ ಎಲೆಗಳ ಟೀ ಕುಡಿದರೆ ಸಕ್ಕರೆ ಮಟ್ಟ ನಿಯಂತ್ರಣ!

ಡಾಲಿ ಧನಂಜಯ್‌ಗೆ ಮೈಸೂರು ಕ್ಷೇತ್ರ ಯಾಕೆ..?;

ಡಾಲಿ ಧನಂಜಯ್‌ಗೆ ಮೈಸೂರು ಕ್ಷೇತ್ರ ಯಾಕೆ..?; ಡಾಲಿ ಧನಂಜಯ್‌ ಅವರು ಜಾತಿಯನ್ನು ನೋಡೋದಿಲ್ಲವಾದರೂ, ರಾಜಕೀಯ ಲಾಭಕ್ಕಾಗಿ ನೋಡಿದರೆ ಅವರು ಲಿಂಗಾಯತ ಸಮುದಾಯದವರು…  ಮೈಸೂರು ಕ್ಷೇತ್ರದಲ್ಲಿ ದಲಿತರು, ಕುರುಬರು, ಮುಸ್ಲಿಂ ಮತಗಳು ಕಾಂಗ್ರೆಸ್‌ ಪರವಾಗಿವೆ.. ಇದರ ಜೊತೆಗೆ ಲಿಂಗಾಯತ ಮತಗಳು ಕೂಡಾ ಕಾಂಗ್ರೆಸ್‌ಗೆ ಬಂದರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವುದು ಸುಲಭವಾಗುತ್ತದೆ. ಹೀಗಾಗಿ ಲಿಂಗಾಯತ  ಸಮುದಾಯದ ಡಾಲಿ ಧನಂಜಯ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಗೆಲ್ಲುತ್ತಾರೆ ಅನ್ನೋ ಲೆಕ್ಕಾಚಾರ ಕಾಂಗ್ರೆಸ್‌ದು ಎಂದು ಹೇಳಲಾಗುತ್ತಿದೆ.
ಅಂದಹಾಗೆ ಮೈಸೂರಿನಲ್ಲಿ ಡಾಲಿ ಧನಂಜಯ್‌ ದೊಡ್ಡ ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ… ದೊಡ್ಡ ಮಟ್ಟದ ಯುವಪಡೆ ಮೈಸೂರಿನಲ್ಲಿ ಡಾಲಿ ಧನಂಜಯ್‌ ಅವರ ಪರವಾಗಿ ಕೆಲಸ ಮಾಡುತ್ತದೆ. ಹೀಗಾಗಿಯೇ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆತಂದು, ಮೈಸೂರಿನಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿದೆ ಎನ್ನಲಾಗ್ತಿದೆ.

ಇದನ್ನೂ ಓದಿ; 6 Habits of Successful People; ಯಶಸ್ವಿ ವ್ಯಕ್ತಿಗಳ ಆರು ಅಭ್ಯಾಸಗಳು; ಇವೇ ಯಶಸ್ಸಿನ ಸೂತ್ರಗಳು!

ಲಿಡ್ಕರ್‌ ಬ್ರಾಂಡ್‌ ಅಂಬಾಸಿಡರ್‌ ಆಗಿರುವ ಡಾಲಿ;

ಲಿಡ್ಕರ್‌ ಬ್ರಾಂಡ್‌ ಅಂಬಾಸಿಡರ್‌ ಆಗಿರುವ ಡಾಲಿ; ನಟ ಡಾಲಿ ಧನಂಜಯ್‌ ಅವರು, ಸಿದ್ದರಾಮಯ್ಯ ಅವರ ಉಚಿತ ಗ್ಯಾರೆಂಟಿಗಳ ಪರವಾಗಿ ಮಾತನಾಡಿದ್ದರು.. ಜತೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಬೆಂಬಲವಾಗಿ ಲಿಡ್ಕರ್‌ ಸಂಸ್ಥೆಯ ಬ್ರಾಂಡ್‌ ಅಂಬಾಸಿಡರ್‌ ಆಗಿಯೂ ಡಾಲಿ ಧನಂಜಯ್‌ ಕೆಲಸ ಮಾಡುತ್ತಿದ್ದಾರೆ.. ಈ ಮೂಲಕ ತಾನ ಬಡವರ ಪರ, ಶೋಷಿತರ ಪರ ಅನ್ನೋದನ್ನು ತೋರಿಸಿಕೊಂಡಿದ್ದಾರೆ. ಯಾವಾಗಲೂ ಸರಳವಾಗಿರುವ ಡಾಲಿ ಧನಂಜಯ್‌ ಕಾಂಗ್ರೆಸ್‌ ಸಿದ್ಧಾಂತಗಳಿಗೆ ಹತ್ತಿರವಾಗಿದ್ದಾರೆ. ಹೀಗಾಗಿ ಅವರು ರಾಜಕೀಯಕ್ಕೆ ಇಳಿಯಬಹುದು ಎಂದೇ ಹೇಳಲಾಗುತ್ತಿದೆ. ಆದ್ರೆ, ಕಾಂಗ್ರೆಸ್‌ ನಾಯಕರ ವೇಳೆ ಡಾಲಿ ಧನಂಜಯ್‌ ಸಮ್ಮತಿ ಸೂಚಿಸಿದ್ದಾರಾ, ಇಲ್ಲವಾ  ಅನ್ನೋದು ಇನ್ನೂ ಗೊತ್ತಾಗಿಲ್ಲ.

ಸದ್ಯ ಡಾಲಿ ಧನಂಜಯ್‌ ಕೈಯಲ್ಲಿ ಮೂರು ನಾಲ್ಕು ಸಿನಿಮಾಗಳಿವೆ. ಅದರಲ್ಲಿ ಬ್ಯುಸಿಯಾಗಿದ್ದಾರೆ… ಹೀಗಿರುವಾಗ ಅವರು, ಚಿತ್ರೀಕರಣ ಬಿಟ್ಟು ರಾಜಕೀಯ ಬರುತ್ತಾರಾ ಅನ್ನೋದು ಪ್ರಶ್ನೆ ಕೂಡಾ ಎದ್ದಿದೆ.

 

Share Post