Lifestyle

ಕ್ರಿಸ್ಪಿಯಾಗಿ ಬೆಂಡೆಕಾಯಿ ಫ್ರೈ ಮಾಡುವುದು ಹೇಗೆ?

ಬೆಂಡೆಕಾಯಿ ಫ್ರೈ ರುಚಿಯ ಜೊತೆಗೆ ತುಂಬಾ ಆರೋಗ್ಯಕರವಾದ ಚಿಪ್ಸ್ ಆಗಿದೆ. ಇದನ್ನು ಊಟದ ಜೊತೆಗೆ ಸೈಡ್‌ ಡಿಶ್‌ ಆಗಿ ಸವಿಯಲು ತುಂಬಾ ರುಚಿಯಾಗಿರುತ್ತೆ. ಇದೊಂದು ಮೈಕ್ರೋವೇವ್ ರೆಸಿಪಿಯಾಗಿದೆ.ಇದನ್ನು ಬೇಕಿದ್ದರೆ ಬಾಣಲೆಯಲ್ಲಿ ಮಾಡಬಹುದು, ಆದರೆ ಮೈಕ್ರೋವೇವ್‌ನಲ್ಲಿ ಮಾಡಿದರೆ ನಿಮಗೆ ತುಂಬಾ ಕ್ರಿಸ್ಪಿಯಾಗಿ ಸಿಗುವುದು.ಇದನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿ
15-20 ಬೆಂಡೆಕಾಯಿ
ಅರ್ಧ ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
ಅರ್ಧ ಚಮಚ ಕೊತ್ತಂಬರಿ ಪುಡಿ
1/4 ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು
1-2 ಚಮಚ ಎಣ್ಣೆ
ಮಾಡುವ ವಿಧಾನ
ಈಗ ಬೇಕಿಂಗ್‌ ಟ್ರೇಗೆ ನಾನ್‌ಸ್ಟಿಕ್ ಬೇಕಿಂಗ್‌ ಶೀಟ್‌ ಹಾಕಿ ಸೆಟ್ ಮಾಡಿ. ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ. * ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ. ನಂತರ ಅವುಗಳನ್ನು ದೊಡ್ಡ ಬೌಲ್‌ನಲ್ಲಿ ಹಾಕಿ. ಈಗ ಬೌಲ್‌ ಮಸಾಲೆ ಸಾಮಗ್ರಿ ಹಾಕಿ (ಎಣ್ಣೆ ಮತ್ತು ಉಪ್ಪು ಬಿಟ್ಟು) ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ. ಆದರೆ ಮೇಲೆ ಎಣ್ಣೆ ಹಾಕಿ ಮಿಕ್ಸ್ ಮಾಡಿ.ಈಗ ಬೆಂಡೆಕಾಯಿಯನ್ನು ಬೇಕಿಂಗ್ ಟ್ರೇ ಮೇಲೆ ಹರಡಿ. ಅದನ್ನು 20 ನಿಮಿಷ ಬೇಯಿಸಿ, ಅದು ಬ್ರೌನ್ (ಕಂದು) ಬಣ್ಣಕ್ಕೆ ತಿರುಗಲಿ. ಈಗ ಓವನ್‌ನಿಂದ ತೆಗೆದು ಉಪ್ಪನ್ನು ಉದುರಿಸಿ, ಬಿಸಿ ಬಿಸಿಯಾಗಿ ಸರ್ವ್ ,ಮಾಡಿ.

Share Post