ತಿರುಪತಿ ತಿಮ್ಮಪ್ಪನ ಒಟ್ಟು ಆಸ್ತಿ 2.25 ಲಕ್ಷ ಕೋಟಿ ರೂಪಾಯಿ; ಟಿಟಿಡಿ ಘೋಷಣೆ
ತಿರುಪತಿ; ತಿರುಪತಿ ತಿಮ್ಮಪ್ಪ ವಿಶ್ವದಲ್ಲೇ ಶ್ರೀಮಂತ ದೇವರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೀಗ ತಿಮ್ಮಪ್ಪನ ಆಸ್ತಿಯನ್ನು ಟಿಟಿಡಿ ಘೋಷಣೆ ಮಾಡಿದೆ. ಟಿಟಿಡಿಯ ಒಟ್ಟು ಚರಾಸ್ತಿ ಹಾಗೂ ಸ್ಥಿರಾಸ್ತಿ ಒಟ್ಟು 2.26 ಲಕ್ಷ ಕೋಟಿ ರೂಪಾಯಿ ಮೌಲ್ಯವಿದೆ ಎಂದು ಹೇಳಿದೆ.
2022–23ನೇ ಸಾಲಿನ ಕರ್ನಾಟಕದ ಬಜೆಟ್‌ಗಿಂತ ತಿಮ್ಮಪ್ಪನ ಆಸ್ತಿ ಕೊಂಚ ಕಡಿಮೆ ಅಷ್ಟೇ. ಅಷ್ಟೊಂದು ಆಸ್ತಿ ತಿಮ್ಮಪ್ಪನ ಬಳಿ ಇದೆ. 2022–23ರ ನಮ್ಮ ರಾಜ್ಯದ ಬಜೆಟ್ ಗಾತ್ರ 2.65 ಲಕ್ಷ ಕೋಟಿಯಾದರೆ, ಟಿಟಿಡಿ ಆಸ್ತಿ 2.26 ಲಕ್ಷ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತಿಮ್ಮಪ್ಪನಿಗೆ ಸಮರ್ಪಣೆಯಾದ ಒಟ್ಟು 10.3 ಟನ್ ಬಂಗಾರವನ್ನು ಠೇವಣಿಯಾಗಿ ಇಡಲಾಗಿದ್ದು, ಇದರ ಒಟ್ಟು ಮೌಲ್ಯ ಅಂದಾಜು 5,300 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇನ್ನು 15,938 ಕೋಟಿ ರೂಪಾಯಿಯಷ್ಟು ನಗರದನ್ನು ಕೂಡಾ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇಡಲಾಗಿದೆ. ದೇಶಾದ್ಯಂತ 960 ಕಡೆ 7,123 ಎಕರೆ ಭೂಮಿ ಕೂಡಾ ಟಿಟಿಡಿ ಹೆಸರಲ್ಲಿದೆ.