ಹುಟ್ಟಹಬ್ಬದ ಪಾರ್ಟಿಯಲ್ಲಿ ಯುವಕನ ಬರ್ಬರ ಹತ್ಯೆ; ಚಾಕುವಿನಿಂದ ಇರಿದು ಕೊಲೆ!
ಬೆಳಗಾವಿ; ಸ್ನೇಹಿತನ ಬರ್ತ್ಡೇ ಪಾರ್ಟಿಯಲ್ಲಿ ಜಗಳವಾಗಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಚಾಕುವಿನಿಂದ ಹೊಟ್ಟೆಗೆ ಇರಿದು ಬಸವರಾಜ ಮುದ್ದಣ್ಣವರ್ (23) ಎಂಬಾತನನ್ನು ಕೊಲೆ ಮಾಡಲಾಗಿದೆ.. ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ..
ಕೊಲೆಯಾದ ಯುವಕ ಎಂಎಸ್ಡಬ್ಲ್ಯೂ ವಿದ್ಯಾರ್ಥಿ ಎಂದು ತಿಳಿದುಬಂದಿದೆ.. ನುಗ್ಗಾನಟ್ಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಎಂಬಾತನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು.. ಇದಕ್ಕೆ ಬಸವರಾಜ ಮುದ್ದಣ್ಣವರ್ (23) ಕೂಡಾ ಹೋಗಿದ್ದ.. ಈ ವೇಳೆ ಆಗಮಿಸಿದ್ದ ಇತರೆ ಸ್ನೇಹಿತರ ಜೊತೆ ಬಸವರಾಜ ಮುದ್ದಣ್ಣವರ್ (23) ಜಗಳವಾಗಿದೆ.. ಇದು ವಿಕೋಪಕ್ಕೆ ತಿರುಗಿದ್ದು, ಬಸವರಾಜ ಮುದ್ದಣ್ಣವರ್ (23) ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ.. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ..
ಬೆಳಗಾವಿ ಜಿಲ್ಲಾಸ್ಪತ್ರೆಗೆ ಯುವಕನ ಮೃತದೇಹ ರವಾನಿಸಲಾಗಿದೆ. ಬಸವರಾಜ ಮುದ್ದಣ್ಣವರ್ (23) ಕಾಲೇಜಿನಲ್ಲಿ ಚಿನ್ನದ ಪದಕ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ..