Lifestyle

Ananth ambani; ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಲವ್‌ ಜರ್ನಿ

ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ವೀರನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚಂಟ್ ಮದುವೆ ಸಂಭ್ರಮ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದೆ,  ಅನಂತ್ ಮತ್ತು ರಾಧಿಕಾ ಮರ್ಚೆಂಟ್‌ ಅವರ ಪ್ರೇಮ-ಪ್ರಣಯದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇಬ್ಬರದ್ದೂ ಲವ್‌ ಮ್ಯಾರೇಜ್‌ ಆಗಿದ್ದು, ಅವರ ಬಗೆಗಿನ ಒಂದಷ್ಟು ಕುತೂಹಲದ ವಿಷಯಗಳನ್ನು ತಿಳಿಯೋಣ ಬನ್ನಿ..

ಇದನ್ನೂ ಓದಿ; Beauty Tips; ಕೆಂಪು ತೊಗರಿ ಬೇಳೆ ಫೇಸ್‌ಪ್ಯಾಕ್‌ ನಿಮ್ಮ ಅಂದ ಹೆಚ್ಚಿಸುತ್ತೆ!

ಬಾಲ್ಯದ ಸ್ನೇಹಿತರು;

ಬಾಲ್ಯದ ಸ್ನೇಹಿತರು;  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಇಬ್ಬರೂ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರೂ ಚಿಕ್ಕಂದಿನಿಂದಲೂ ಪರಿಚಿತರು. 2018 ರಲ್ಲಿ, ಇಬ್ಬರೂ ಒಟ್ಟಿಗೆ ಇರುವ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಅಲ್ಲದೇ ಇವರಿಬ್ಬರು ಪಾರ್ಟಿ ಹಾಗೂ ಇತರೆ ಸ್ಥಳಗಳಲ್ಲಿ ರೆಗ್ಯುಲರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಇವರಿಬ್ಬರ ನಡುವೆ ಲವ್ ಇದೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.

ಇದನ್ನೂ ಓದಿ; Murder; ಸಂಸದ ಉಮೇಶ್‌ ಜಾಧವ್‌ ಬೆಂಬಲಿಗನ ಭೀಕರ ಹತ್ಯೆ!

ಕೌಟುಂಬಿಕ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ;

ಕೌಟುಂಬಿಕ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ; ಕಳೆದ ಕೆಲವು ವರ್ಷಗಳಿಂದ ರಾಧಿಕಾ ಮರ್ಚೆಂಟ್ ಅಂಬಾನಿ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿಶೇಷವಾಗಿ 2018 ರಲ್ಲಿ, ಅವರು ಇಶಾ ಅಂಬಾನಿ ಅವರ ಮದುವೆಯಲ್ಲಿ ಭಾಗವಹಿಸಿದ್ದರು. 2019 ರಲ್ಲಿ ಆಕಾಶ್ ಅಂಬಾನಿ ಮದುವೆಯಲ್ಲಿ ಕೂಡಾ ಭಾಗವಹಿಸಿದ್ದರು. ಭಾರತೀಯ ನೃತ್ಯ ಕಲಾವಿದರಿಗೆ ಚೊಚ್ಚಲ ಪ್ರವೇಶ ಬಹಳ ಮುಖ್ಯ. ರಾಧಿಕಾ ಮರ್ಚೆಂಟ್ ಒಬ್ಬ ಭಾರತೀಯ ಬ್ಯಾಲೆ ನೃತ್ಯಗಾರ್ತಿ. ಆದ್ದರಿಂದ, ಮುಖೇಶ್ ಅಂಬಾನಿ ಕುಟುಂಬವು 2022 ರಲ್ಲಿ ಭಾವಿ ಸೊಸೆ ರಾಧಿಕಾ ಅವರ ಚೊಚ್ಚಲ ಕಾರ್ಯಕ್ರಮವನ್ನು ಆಯೋಜಿಸಿದೆ.

ಇದನ್ನೂ ಓದಿ; Caste Census Report; ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ; ಬಿಡುಗಡೆ ಮಾಡುತ್ತಾ ಸರ್ಕಾರ..?

ರೋಕಾ ಇವೆಂಟ್‌;

ರೋಕಾ ಇವೆಂಟ್‌; ಪಂಜಾಬಿ ಮದುವೆಗಳಲ್ಲಿ ಈ ಕಾರ್ಯಕ್ರಮ ಬಹಳ ಮುಖ್ಯ. ಇದನ್ನು ಮದುವೆಗೆ ಮೊದಲು ಮಾಡಲಾಗುತ್ತದೆ. ಗ್ರಾಮದಲ್ಲಿ ಹೂ ಗಿಡ ನೆಡುವ ಕಾರ್ಯಕ್ರಮವಿದ್ದಂತೆ. ಇದು ಡಿಸೆಂಬರ್ 29, 2022 ರಂದು ನಾಥವಾಡಾದ ಶ್ರೀನಾಥಜಿ ದೇವಸ್ಥಾನದಲ್ಲಿ ನಡೆಯಿತು.

ಎರಡೂ ಕುಟುಂಬಗಳು;

ಎರಡೂ ಕುಟುಂಬಗಳು; ಆನಂದ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕೂಡ ದೊಡ್ಡ ಕೈಗಾರಿಕೋದ್ಯಮಿಗಳ ವಂಶಸ್ಥರು. ಅನಂತ್ ಅಂಬಾನಿ ಮುಖೇಶ್ ಅಂಬಾನಿಯವರ ಕಿರಿಯ ಮಗ. ಅದೇ ರೀತಿ, ರಾಧಿಕಾ ಮರ್ಚಂಟ್ ಎನ್ ಕೋರ್ ಹೆಲ್ತ್‌ಕೇರ್ ಪ್ರೈವೇಟ್‌ನ ಸಿಇಒ ವೀರೆನ್ ಮರ್ಚೆಂಟ್ ಅವರ ಪುತ್ರಿ.

ಇದನ್ನೂ ಓದಿ; BBMP Budget; ಬ್ರ್ಯಾಂಡ್‌ ಬೆಂಗಳೂರಿಗಾಗಿ 8 ವಿಭಾಗ ರಚನೆ!

ನಿಶ್ಚಿತಾರ್ಥ, ಮದುವೆ;

ನಿಶ್ಚಿತಾರ್ಥ, ಮದುವೆ; ಆನಂದ್ ಮತ್ತು ರಾಧಿಕಾ ಜನವರಿ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಹಲವು ಬಾಲಿವುಡ್ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು. ಜುಲೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾಗಲಿದ್ದಾರೆ. ನಿಶ್ಚಿತಾರ್ಥ ಮತ್ತು ವಿವಾಹ ಪೂರ್ವ ಸಮಾರಂಭಗಳು ಅದ್ಧೂರಿಯಾಗಿ ನಡೆಯುವುದರಿಂದ ಎಲ್ಲರೂ ಮದುವೆ ಕಾರ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ; Deepika padukone; ತಾಯಿಯಾಗ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ!

Share Post