Politics

Caste Census Report; ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ; ಬಿಡುಗಡೆ ಮಾಡುತ್ತಾ ಸರ್ಕಾರ..?

ಬೆಂಗಳೂರು;  ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತೀವ್ರ ವಿರೋಧದ ನಡುವೆಯೂ ಇಂದು ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡಲಾಗಿದೆ. ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಆರಂಭಿಸಿದ್ದ ಸಮೀಕ್ಷಾ ವರದಿಯನ್ನು ಈಗ ಸರ್ಕಾರ ಸ್ವೀಕಾರ ಮಾಡಿದೆ. ಆದ್ರೆ ಈ ವರದಿ ಅವೈಜ್ಞಾನಿಕವಾಗಿದೆ ಎಂದು ಕಾಂಗ್ರೆಸ್‌ನ ಕೆಲ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ವರದಿಯನ್ನು ಸರ್ಕಾರ ಬಿಡುಗಡೆ ಮಾಡುತ್ತಾ, ಇಲ್ಲವಾ ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಸಂಪುಟ ಸಭೆಯಲ್ಲಿ ಚರ್ಚಿಸ್ತೀನಿ ಎಂದ ಸಿದ್ದರಾಮಯ್ಯ;

ಸಂಪುಟ ಸಭೆಯಲ್ಲಿ ಚರ್ಚಿಸ್ತೀನಿ ಎಂದ ಸಿದ್ದರಾಮಯ್ಯ; ಇನ್ನು ವರದಿ ಸ್ವೀಕಾರದ ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ವರದಿ ಸ್ವೀಕಾರ ಮಾಡಿದ್ದೇನೆ. ವರದಿಯನ್ನು ಓದಿದ ನಂತರ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

2014ರಲ್ಲಿ ಆರಂಭವಾಗಿದ್ದ ಜಾತಿಗಣತಿ;

2014ರಲ್ಲಿ ಆರಂಭವಾಗಿದ್ದ ಜಾತಿಗಣತಿ; ಸಿದ್ದರಾಮಯ್ಯ ಅವರು ಈ ಮೊದಲು 2013-18ರವರೆಗೆ ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಅಂದರೆ 2014ರಲ್ಲಿ ಜಾತಿಗಣತಿ ವರದಿ ತಯಾರಿಸಲು ಆಯೋಗ ರಚನೆ ಮಾಡಲಾಗಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಅಂದರೆ ಜಾತಿ ಗಣತಿಯನ್ನು ಮಾಡಿಸಲಾಗಿತ್ತು. ಆದ್ರೆ ಆಗಿನ ಸರ್ಕಾರದ ಅವಧಿಯಲ್ಲಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿರಲಿಲ್ಲ. ಇದರ ನಡುವೆಯೇ ವರದಿ ಸೋರಿಕೆಯಾಗಿತ್ತು. ಈ ವೇಳೆ ಈ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಜೊತೆಗೆ ಆ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೆ, ಸಿದ್ದರಾಮಯ್ಯ ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಜಾತಿ ಗಣತಿ ಸ್ವೀಕಾರಕ್ಕೆ ಮುಂದಾಗಿದ್ದರು. ಕಾಂಗ್ರೆಸ್‌ನಲ್ಲೇ ಕೆಲವರ ವಿರೋಧವಿದ್ದರೂ, ಸಿದ್ದರಾಮಯ್ಯ ವರದಿ ತಯಾರಿಸಿ, ಸರ್ಕಾರ ನೀಡಲು ಸೂಚನೆ ಕೊಟ್ಟಿದ್ದರು. ಅದರಂತೆ ಇಂದು ವರದಿ ಸಲ್ಲಿಸಲಾಗಿದೆ.

350ಕ್ಕೂ ಹೆಚ್ಚು ಪುಟಗಳ ವರದಿ ಇದು;

350ಕ್ಕೂ ಹೆಚ್ಚು ಪುಟಗಳ ವರದಿ ಇದು; ಕಾಂತರಾಜು ಅವರ ಅಧ್ಯಕ್ಷತೆ 2014ರಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತಿಳಿಯಲು ಈ ಜಾತಿಗಣತಿ ವರದಿಗೆ ಸಿಎಂ ಆದೇಶ ಕೊಟ್ಟಿದ್ದರು. ರಾಜ್ಯದಾದ್ಯಂತ 1ಲಕ್ಷ 60 ಸಾವಿರ ಸರ್ಕಾರಿ ನೌಕರರು ಸುಮಾರು 1 ಕೋಟಿ 30 ಲಕ್ಷ ಕುಟುಂಬಗಳನ್ನ ಭೇಟಿ ಮಾಡಿ ವರದಿ ತಯಾರಿಸಿದ್ದರು. ಇದಕ್ಕಾಗಿ ಸರ್ಕಾರು ಸುಮಾರು 169 ಕೋಟಿ ರೂಪಾಯಿ ಖರ್ಚು ಮಾಡಿತ್ತು.

ಒಕ್ಕಲಿಗರು, ಲಿಂಗಾಯತರ ತೀವ್ರ ವಿರೋಧ;

ಒಕ್ಕಲಿಗರು, ಲಿಂಗಾಯತರ ತೀವ್ರ ವಿರೋಧ; ಈ ವರದಿಗೆ ಒಕ್ಕಲಿಗರು ಹಾಗೂ ಲಿಂಗಾಯತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೊಂದು ಅವೈಜ್ಞಾನಿಕ ವರದಿ ಎಂದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ನಾಯಕರು ಹೇಳಿದ್ದರು. ಸರ್ಕಾರದ ಭಾಗವೇ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಾ ಈ ಕುರಿತ ಒಕ್ಕಲಿಗ ಸಮುದಾಯದ ಮನವಿ ಪತ್ರಕ್ಕೆ ಸಹಿ ಹಾಕಿದ್ದರು. ಇನ್ನು ಈ ವರದಿಯನ್ನು ಮನೆಯಲ್ಲೇ ಕೂತು ತಯಾರಿಸಲಾಗಿದೆ ಎಂದು ಈ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದರು.

Share Post