CrimeNational

3 ತಿಂಗಳಿಂದ ತಾಯಿಯ ದೇಹವನ್ನು ಮನೆಯಲ್ಲಿಟ್ಟುಕೊಂಡಿದ್ದ ಮಗ!

ಅಸ್ಸಾಂ; ತಾಯಿ ಸಾವನ್ನಪ್ಪಿದ್ದರೂ 3 ತಿಂಗಳಿಂದ ಮೃತದೇಹವನ್ನು ಹಾಗೆಯೇ ಇಟ್ಟುಕೊಂಡಿದ್ದ ಘಟನೆ ವರದಿಯಾಗಿದೆ. ಮಗ ತನ್ನ ತಾಯಿಯ ದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ..ಅಸ್ಸಾಂ ನ ಗುವಾಹತಿಯಲ್ಲಿ ಈ ಘಟನೆ ನಡೆದಿದೆ.

  ಗುವಾಹಟಿ ವಾಸಿಯಾಗಿರುವ ಜೈದೀಪ್ ದೇವ್ ಎಂಬ ವ್ಯಕ್ತಿ ಆತನ ತಾಯಿ ಸತ್ತಿದ್ದರೂ 3 ತಿಂಗಳಿಂದ ದೇಹ ಮನೆಯಲ್ಲೇ ಇಟ್ಟುಕೊಂಡಿದ್ದ.. ತಾಯಿಯ ಹೆಸರು ಪೂರ್ಣಿಮಾ ದೇವ್.. ತಾಯಿ ಶವ ಮನೆಯಲ್ಲೇ ಇದ್ದರೂ ಮಗ ತನ್ನ ದಿನಚರಿ ಮುಂದುವರೆಸಿದ್ದ.. ಜೊತೆಗೆ ತಾಯಿಯ ಖಾತೆಯಲ್ಲಿದ್ದ

ಹಣ ಹಿಂಪಡೆಯಲು ಆಗಾಗ್ಗೆ ಬ್ಯಾಂಕ್‌ಗೂ ಹೋಗುತ್ತಿದ್ದ. ಈ ವಿಚಿತ್ರ ವರ್ತನೆ ಅಕ್ಕಪಕ್ಕದವರಿಗೆ ಅನುಮಾನ ಉಂಟುಮಾಡಿತ್ತು.. ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದರು..

  ಪೊಲೀಸರು ಜ್ಯೋತಿಕುಚಿಯ ಮನೆಯಲ್ಲಿ ಪರಿಶೀಲನೆ ಮಾಡಿದಾಗ ಮಹಿಳೆಯ ಅಸ್ಥಿಪಂಜರ ಹಾಸಿಗೆ ಮೇಲೆ ಮಲಗಿರುವಂತೆ ಸಿಕ್ಕಿದೆ. ಜೈದೀಪ್ ಅವರ ತಾಯಿ ಪೂರ್ಣಿಮಾ ದೇವ್ ಎಂದು ಗುರುತಿಸಲಾಗಿದೆ. ನಿವೃತ್ತ ರೈಲ್ವೇ ಅಧಿಕಾರಿಯಾಗಿದ್ದ ತನ್ನ ಪತಿಯ ಮರಣದ ನಂತರ ಪೂರ್ಣಿಮಾ ಜೈದೀಪ್ ಅವರೊಂದಿಗೆ ವಾಸಿಸುತ್ತಿದ್ದರು.

 

Share Post