InternationalLifestyle

ಗಂಡ ಮನೆಯಲ್ಲಿ ವಧುವಿಗೆ 4 ವರ್ಷ ರಾಜ ಮರ್ಯಾದೆ!; ಸುಡಾನ್‌ನಲ್ಲಿ ಮಹಿಳೆ ಸ್ವತಂತ್ರ ದೇವತೆ..

ದಕ್ಷಿಣ ಸುಡಾನ್‌; ನಮ್ಮಲ್ಲಿ ಪುರುಷ ಪ್ರಧಾನ ಸಮಾಜಗಳೇ ಹೆಚ್ಚು.. ಬಹುತೇಕ ಕಡೆ ಹೆಣ್ಣು ಬರೀ ಅಡುಗೆ ಮನೆಗೆ ಹಾಗೂ ಮನೆ ಕೆಲಸಕ್ಕೆ ಸೀಮಿತ.. ಹೆಣ್ಣನ್ನು ಬರೀ ಭೋಗದ ವಸ್ತುವಾಗಿ ನೋಡುವವರೇ ಜಾಸ್ತಿ ಜನ ಇದ್ದಾರೆ.. ಆದ್ರೆ ಅತ್ಯಂತ ಬಡ ದೇಶ ದಕ್ಷಿಣ ಸೂಡಾನ್‌ನಲ್ಲಿ ಮಹಿಳೆಗೆ ರಾಜ ಮರ್ಯಾದೆ ಇದೆ.. ಮದುವೆಯಾಗಿ ಹೋಗುವ ಹೆಣ್ಣು ಗಂಡನ ಮನೆಯಲ್ಲಿ ಮೊದಲ ನಾಲ್ಕು ವರ್ಷ ತನಗೆ ಇಷ್ಟ ಬಂದಂತೆ ಬದುಕಬಹುದು.. ಆಕೆಯ ಆ ನಾಲ್ಕು ವರ್ಷ ವೈಭವೋಪೇತ ಆತಿಥ್ಯ ಸಿಗುತ್ತೆ..

ಮದುವೆ ಎಂದರೆ ಇಲ್ಲಿ ವಧುವಿಗೆ ಸ್ವಾತಂತ್ರ್ಯ..!;

ಬಹುತೇಕ ಕಡೆ ಮದುವೆ ಅನ್ನೋದು ಹೆಣ್ಣು ಮಕ್ಕಳಿಗೆ ನರಕ ಎಂಬಂತೆ ಭಾವಿಸುತ್ತಾರೆ.. ಗಂಡಿನ ಅಡಿಯಾಳಾಗಿ ಬದುಕಬೇಕಾದ ಪರಿಸ್ಥಿತಿ ಎಂದು ಮಹಿಳೆಯರು ಮರುಗುವುದಿದೆ.. ಆದ್ರೆ ದಕ್ಷಿಣ ಸುಡಾನ್‌ ನಲ್ಲಿ ಮದುವೆ ಅನ್ನೋದು ಮಹಿಳೆಗೆ ಸ್ವಾತಂತ್ರ್ಯ.. ಮದುವೆಯಾಗಿ ಹೊಸದಾಗಿ ಗಂಡನೆ ಮನೆಗೆ ಬಂದ ವಧು, ನಾಲ್ಕು ವರ್ಷಗಳ ಕಾಲ ಯಾವ ಕೆಲಸವನ್ನೂ ಮಾಡುವಂತಿಲ್ಲ.. ಆಕೆ ಸ್ವಚ್ಛಂದವಾಗಿ ಜೀವನ ಸಾಗಿಸಬಹುದು.. ಮನೆಯಲ್ಲಿ ಅಡುಗೆ ಮಾಡುವುದು, ಕಸ ಗುಡಿಸುವುದು, ಬಟ್ಟೆ ಒಗೆಯುವುದು ಸೇರಿ ಯಾವ ಕೆಲಸವನ್ನೂ ನಾಲ್ಕು ವರ್ಷಗಳ ಕಾಲ ವಧು ಮಾಡಬೇಕಾಗಿಲ್ಲ.. ಅನಂತರವೂ ಕೂಡಾ ಮಹಿಳೆಗೆ ಸಿಗುವ ಗೌರವ ಪಡೆದುಕೊಂಡೇ ಆ ಹೆಣ್ಣು ಗಂಡನ ಮನೆಯಲ್ಲಿ ಜೀವನ ಸಾಗಿಸುತ್ತಾಳೆ..

ಡಿಂಕಾ ಎಂಬ ಈ ಸಂಪ್ರದಾಯ ಎಲ್ಲರಿಗೂ ಮಾದರಿ;

ಮದುವೆಯಾದ ಮೇಲೆ ನಾಲ್ಕು ವರ್ಷಗಳ ಕಾಲ ಗಂಡನ ಮನೆಯಲ್ಲಿ ವಧುವಿಗೆ ಸಿಗುವ ಆತಿಥ್ಯಕ್ಕೆ ಡಿಂಕಾ ಎಂದು ಕರೆಯಲಾಗುತ್ತದೆ.. ಈ ನಾಲ್ಕು ವರ್ಷಗಳ ಅವಧಿಯನ್ನು “Anyuuc” ಎಂದು ಕರೆಯಲಾಗುತ್ತದೆ.. ಇದು ನವ ವಧು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತದೆ..  ತನ್ನ ಪತಿಯ ಮನೆಯ ಸಂಪ್ರದಾಯಗಳು, ಅಲ್ಲಿನ ಪದ್ಧತಿಗಳನ್ನು ಕಲಿಯುವ ಉದ್ದೇಶಕ್ಕಾಗಿ ಈ ಪದ್ಧತಿಯನ್ನು ಇಡಲಾಗಿದೆ.. ಮೊದಲಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದ್ದು, ಈಗಲೂ ಕೂಡಾ ಈ ಸಂಪ್ರದಾಯ ಮುಂದುವರೆದಿದೆ.. ಈ ನಾಲ್ಕು ವರ್ಷದಲ್ಲಿ ಗಂಡನ ಮನೆಯಲ್ಲಿ ಗಂಡನ ಸಹೋದರಿ ಅಡುಗೆ ಮಾಡುವುದು, ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆಯುವುದು ಸೇರಿ ಎಲ್ಲಾ ಕೆಲಸಗಳನ್ನೂ ಮಾಡುತ್ತಾರೆ.. ವಧು ಕೇವಲ ಗಂಡನ ಮನೆಯವರನ್ನು ಅರ್ಥ ಮಾಡಿಕೊಳ್ಳುವುದು, ಸ್ವಚ್ಛಂಧವಾಗಿ ಜೀವಿಸುವುದು, ಗಂಡನ ಮನೆಯ ಪದ್ಧತಿಗಳನ್ನು ರೂಢಿ ಮಾಡಿಕೊಳ್ಳುವುದು ಮಾಡುತ್ತಾಳೆ..

4 ವರ್ಷದ ನಂತರ ʻಥಾಟ್‌ʼ ಎಂಬ ಬಾಡೂಟದ ಪಾರ್ಟಿ!;

ನಾಲ್ಕು ವರ್ಷದ ಕಾಲ ವಧು ಗಂಡನ ಮನೆಯ ಎಲ್ಲಾ ಸಂಪ್ರದಾಯಗಳನ್ನೂ ಕಲಿಯುತ್ತಾಳೆ.. ಗಂಡನನ್ನು, ಗಂಡನ ಮನೆಯವರನ್ನೂ ಅರ್ಥ ಮಾಡಿಕೊಳ್ಳುತ್ತಾಳೆ.. ಈ ನಾಲ್ಕು ವರ್ಷಗಳ ಅನುಭವದಲ್ಲಿ ಆಕೆಗೆ ಗಂಡನ ಮನೆಯಲ್ಲಿ ಬದುಕಬಹುದು, ಗಂಡನೊಂದಿಗೆ ಸಂಸಾರ ನಡೆಸಬಹುದು ಅನಿಸಬೇಕು.. ಆಗ ಆಕೆ ಅಲ್ಲಿಯೇ ಜೀವನ ಕಳೆಯಲು ಗ್ರೀನ್‌ ಸಿಗ್ನಲ್‌ ಕೊಡುತ್ತಾಳೆ.. ಆಗ ಗಂಡ ʻಥಾಟ್‌ʼ ಎಂಬ ಬಾಡೂಟದ ಪಾರ್ಟಿ! ಏರ್ಪಡಿಸುತ್ತಾನೆ.. ಇದಕ್ಕೆ ಕನಿಷ್ಠ ಎಂದರೂ 3 ಹಸುಗಳು ಹಾಗೂ 5 ಮೇಕೆಗಳನ್ನು ಬಲಿ ಕೊಡಲಾಗುತ್ತದೆ.. ಎರಡೂ ಕಡೆಯ ಬಂಧುಗಳನ್ನು ಕರೆಸಿ ದೊಡ್ಡ ಪಾರ್ಟಿ ನೀಡಲಾಗುತ್ತದೆ..

ಇಷ್ಟವಾಗದಿದ್ದರೆ ತವರು ಮನೆಗೆ ಹೋಗುವ ವಧು!;

ದಕ್ಷಿಣ ಸೂಡಾನ್‌ನಲ್ಲಿ ವರದಕ್ಷಿಣೆ ಇಲ್ಲ.. ವಧು ದಕ್ಷಿಣೆ ಇರುತ್ತದೆ.. ಹೆಣ್ಣನ್ನು ಮದುವೆಯಾಗಬೇಕಾದರೆ ಹೆಣ್ಣಿನ ಮನೆಯವರಿಗೆ ಗಂಡಿನ ಮನೆಯವರು 100ರಿಂದ 500 ಹಸುಗಳನ್ನು ವಧು ದಕ್ಷಿಣೆಯಾಗಿ ನೀಡುತ್ತಾರೆ.. ಇದಾದ ಮೇಲೆ ಮದುವೆ ನಡೆಯುತ್ತದೆ.. ಅನಂತರ ನಾಲ್ಕು ವರ್ಷ ವಧುವಿಗೆ ಗಂಡನ ಮನೆಯಲ್ಲಿ ಸ್ವಾತಂತ್ರ್ಯದ ವರ್ಷಗಳು.. ಈ ಸಮಯದಲ್ಲಿ ಗಂಡ ಹಾಗೂ ಗಂಡನ ಮನೆಯವರು ಅನುಚಿತವಾಗಿ ವರ್ತಿಸಿದರೆ, ಗಂಡನ ವರ್ತನೆ ಇಷ್ಟವಾಗದಿದ್ದರೆ, ಅವರ ಸಂಪ್ರದಾಯಗಳು ಚೆನ್ನಾಗಿಲ್ಲ ಅನಿಸಿದರೆ ವಧು, ಗಂಡನ ಮನೆ ಬಿಟ್ಟು ತವರು ಸೇರುತ್ತಾಳೆ.. ಇದನ್ನು ಪ್ರಶ್ನಿಸುವ ಅಧಿಕಾರ ಗಂಡನ ಮನೆಯವರಿಗಿಲ್ಲ.. ಸೂಕ್ತ ರೀಸನ್‌ ಹೇಳಿ ತವರಿಗೆ ಹೋಗಬಹುದು.. ಈ ವೇಳೆ ವಧು ದಕ್ಷಿಣೆಯಾಗಿ ಪಡೆದ ಹಸುಗಳನ್ನು ವಾಪಸ್‌ ಕೊಡುವ ಅವಶ್ಯಕತೆಯೂ ಇರುವುದಿಲ್ಲ..

 

Share Post