ಉಕ್ರೇನ್-ರಷ್ಯಾ ಸಮರ: ಜೆಲೆನ್ ಸ್ಕಿ ಪ್ರಾಣ ಉಳಿಸಲು ಅಮೆರಿಕಾ ಸರ್ಕಸ್
ಉಕ್ರೇನ್: ಯಾವುದೇ ಕ್ಷಣದಲ್ಲಾದ್ರೂ ರಷ್ಯಾ ಸೇನೆ ಕೀವ್ ಅನ್ನು ಆಕ್ರಮಣ ಮಾಡಲು ಸಿದ್ದರಾಗಬಹುದು. ಉಕ್ರೇನ್ ರಕ್ಷಣೆಗಾಗಿ ಸತತ ಪ್ರಯತ್ನ ಮಾಡುತ್ತಿರುವ ಝೆಲೆನ್ಸ್ಕಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಮೆರಿಕಾ ಸೈನಿಕರು ಮುಂದಾಗಿದ್ದಾರೆ. ಝೆಲೆನ್ಸ್ಕಿ ರಷ್ಯಾ ಕೈಗೆ ಸಿಕ್ಕಿಬಿದ್ದರೆ ಅವರ ಜೀವಕ್ಕೆ ಅಪಾಯವಿದೆ ಎಂಬುದನ್ನು ಅರಿತ ಅಮೆರಿಕ ಅವರ ರಕ್ಷಣೆಗೆ ನಿಂತಿದೆ. ರಷ್ಯಾದ ಪಡೆಗಳು ಕೀವ್ ಅನ್ನು ವಶಪಡಿಸಿಕೊಳ್ಳುವ ಮೊದಲು ಝೆಲೆನ್ಸ್ಕಿಯನ್ನು ಸುರಕ್ಷಿತವಾಗಿ ದೇಶದಿಂದ ಬೇರೆಡೆಗೆ ಸ್ಥಳಾಥರ ಮಾಡಲು ಯುನೈಟೆಡ್ ಸ್ಟೇಟ್ಸ್ ಚಿಂತನೆ ನಡೆಸಿದೆ. ಆದರೆ ರಷ್ಯಾ ಆಫರ್ ಅನ್ನು ಜೆಲೆನ್ ಸ್ಕಿ ತಿರಸ್ಕರಿಸಿದ್ದು ಕೀವ್‌ನಲ್ಲಿ ಉಳಿಯಲು ನಿರ್ಧಾರ ಮಾಡಿದ್ದಾರೆ.
ಯುದ್ಧದ ಮೂರನೇ ದಿನವಾದ ಇಂದೂ ಕೂಡ ಉಕ್ರೇನ್‌ನಲ್ಲಿ ಕ್ಷಿಪಣಿಗಳು ಮತ್ತು ಬಾಂಬ್‌ಗಳಿಂದ ಶಬ್ದ ಮೊಳಗಿದೆ. ರಷ್ಯಾ ಸೇನೆ ನಿನ್ನೆ ಕೀವ್ ಆಕ್ರಮಣಕ್ಕೆ ಪ್ರಯತ್ನ ಪಟ್ಟರೂ ಉಕ್ರೇನ್ ಸೈನಿಕರು ಮತ್ತು ಶಸ್ತ್ರಸಜ್ಜಿತ ನಾಗರಿಕರಿಂದ ಪ್ರತಿರೋಧದಿಂದ ಅದು ಸಾಧ್ಯವಾಲಿಲ್ಲ. ರಷ್ಯಾ ನಿರೀಕ್ಷೆಗಿಂತ ವೇಗವಾಗಿ ಕೀವ್ ಅನ್ನು ಆಕ್ರಮಿಸಿಕೊಳ್ಳುವ ನಿರೀಕ್ಷೆಯಿದೆ.
ರಷ್ಯಾ ತನ್ನ ದಾಳಿಗಳೊಂದಿಗೆ ಮುಂದೆ ನುಗ್ಗುತ್ತಿದೆ. ಮೂರು ಕಡೆಯಿಂದ ಕಾಲಾಳುಪಡೆ ಮತ್ತು ಟ್ಯಾಂಕ್‌ಗಳೊಂದಿಗೆ ಹಲವಾರು ನಗರಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ. ರಾಜಧಾನಿ ಕೀವ್ ಮತ್ತು ಎರಡನೇ ದೊಡ್ಡ ನಗರವಾದ ಖಾರ್ಕಿವ್ ಸೇರಿದಂತೆ ಹಲವಾರು ನಗರಗಳಲ್ಲಿ ಉಕ್ರೇನ್ ಸೇನೆ ಪುಟಿನ್ ಪಡೆಗಳೊಂದಿಗೆ ಹೋರಾಡುತ್ತಿವೆ. ಉತ್ತರ, ದಕ್ಷಿಣ ಮತ್ತು ಪೂರ್ವದಿಂದ ಪುಟಿನ್ ಪಡೆಗಳು ಪ್ರಮುಖ ಆಯಕಟ್ಟಿನ ಪ್ರದೇಶಗಳತ್ತ ಸಾಗುತ್ತಿವೆ. ಅವರನ್ನು ತಡೆಯಲು ಜನರನ್ನು ಸಜ್ಜುಗೊಳಿಸಿರುವ ಉಕ್ರೇನ್ ಸೇನೆಯು ರಷ್ಯಾದ ಪಡೆಗಳನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷನ ಜೀವ ಉಳಿಸಲು ಅಮೆರಿಕಾ ಶತ ಪ್ರಯತ್ನ ನಡೆಸುತ್ತಿದೆ.