International

ದಕ್ಷಿಣ ಕೊರಿಯಾದಲ್ಲಿ ಭೀಕರ ಕಾಡ್ಗಿಚ್ಚು; 24000 ಹೆಕ್ಟೇರ್‌ ಅರಣ್ಯ ನಾಶ

ಸಿಯೋಲ್; ದಕ್ಷಿಣ ಕೊರಿಯಾದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಒಂದು ವಾರದ ಹಿಂದೆ ಕಾಣಿಸಿಕೊಂಡ ಈ ಕಾಡ್ಗಿಚ್ಚು, 24000 ಹೆಕ್ಟೇರ್‌ ಅರಣ್ಯವನ್ನು ಸುಟ್ಟು ಬೂದಿ ಮಾಡಿದೆ. ಇದರಿಂದಾಗಿ ಸಾವಿರಾರು ಪ್ರಾಣಿ ಸಂಕುಲ ನಾಶವಾಗಿದೆ ಎಂದು ತಿಳಿದುಬಂದಿದೆ. 

    ದಕ್ಷಿಣ ಕೊರಿಯಾದ ಪೂರ್ವ ಕರಾವಳಿ ಪರ್ವತ ಪ್ರದೇಶದಲ್ಲಿ ಈ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅದು ಭೀಕರವಾಗಿ ಹಬ್ಬಿದೆ. ಇದು ದಕ್ಷಿಣ ಕೊರಿಯಾ ಇತಿಹಾಸದಲ್ಲೇ ಅತಿ ದುಡ್ಡ ಅಗ್ನಿ ದುರಂತ ಎಂದು ಗೊತ್ತಾಗಿದೆ.  ಸಿಯೋಲ್‌ನಿಂದ ಆಗ್ನೇಯಕ್ಕೆ ಸುಮಾರು 330 ಕಿಲೋಮೀಟರ್​​ ದೂರದಲ್ಲಿರುವ ಪೂರ್ವ ಕರಾವಳಿ ಪಟ್ಟಣವಾದ ಉಲ್ಜಿನ್‌ನಲ್ಲಿ ಈ ಕಾಡ್ಗಿಚ್ಚು ಮೊದಲು ಶುರುವಾಯಿತು. ಕಳೆದ ಶುಕ್ರವಾರ ಕಾಣಿಸಿಕೊಂಡಿದ್ದ ಬೆಂಕಿ ಈಗಲೂ ವ್ಯಾಪಿಸುತ್ತಲೇ ಇದೆ. ಒಂದು ವಾರವಾದರೂ ಕಾಡ್ಗಿಚ್ಚು ಕಡಿಮೆಯಾಗುತ್ತಿಲ್ಲ. ಅದು ವಿಸ್ತರಿಸುತ್ತಲೇ ಹೋಗುತ್ತಿದೆ.

2000ರಲ್ಲಿ ಕೂಡಾ ಇಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿತ್ತು. ಆದ್ರೆ ಒಂಬತ್ತು ದಿನಗಳಲ್ಲಿ ಆ ಕಾಡ್ಗಿಚ್ಚನ್ನು ನಿಯಂತ್ರಿಸಲಾಗಿತ್ತು. ಅಷ್ಟೊತ್ತಿಗೆ 23 ಸಾವಿರ ಹೆಕ್ಟೇರ್‌ ಕಾಡು ನಾಶವಾಗಿತ್ತು. ಈ ಬಾರಿ ಕೇವಲ ಏಳು ದಿನಗಳಲ್ಲೇ 24 ಸಾವಿರ ಹೆಕ್ಟೇರ್‌ ಕಾಡು ನಾಶವಾಗಿದೆ. ಮತ್ತಷ್ಟು ಕಾಡು ಭಸ್ಮವಾಗುವ ಅಪಾಯವಿದೆ.

Share Post