International

Nuclear War:ಅಣುಬಾಂಬ್‌ ಅಂದರೆ ಏನು..? ಯಾವ ಯಾವ ದೇಶದ ಬಳಿ ಎಷ್ಟೆಷ್ಟು ಅಣುಬಾಂಬ್‌ಗಳಿವೆ..?

ಪ್ರಪಂಚದಲ್ಲಿ ಮೊದಲ ಅಣ್ವಾಯುಧ ಪರೀಕ್ಷೆ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿನ ಅಲೋಮಾಗೋರ್ಡ್‌ ಏರ್‌ಬೇಸ್‌ನಲ್ಲಿ 1945 ಜುಲೈ 16 ರಂದು ನಡೆಯಿತು. ಟ್ರಿನಿಟಿ ಎಂಬ ಕೋರ್ಡ್‌ ಮೂಲಕ ಈ ಪರೀಕ್ಷೆ ನಡೆದು 76 ವರ್ಷಗಳಾಗಿವೆ. ಈ ಪರೀಕ್ಷೆ ನಡೆದ ಕೆಲ ವಾರಗಳಲ್ಲೇ ಅಂದರೆ ಅದೇ 1945 ರ ಆಗಸ್ಟ್‌ 6ರಂದು ಜಪಾನ್‌ ನಗರಗಳಾದ ಹಿರೋಷಿಮಾ ಹಾಗೂ ನಾಗಸಾಕಿ ಮೇಲೆ ಅಣುಬಾಂಬ್‌ ದಾಳಿ ನಡೆಯಿತು.

   ಈ ಅಣುಬಾಂಬ್‌ ದಾಳಿಯಲ್ಲಿ ಹಿರೋಷಿಮಾದಲ್ಲಿ 90000-166000 ಮಂದಿ ಸಾವನ್ನಪ್ಪಿದ್ದರು. ನಾಗಸಾಕಿಯಲ್ಲಿ 60000-80000 ಮಂದಿ ಸಾವನ್ನಪ್ಪಿದ್ದರು. ಈ ದಾಳಿಗಳಿಂದಾಗಿ ಎರಡೂ ನಗರಗಳು ನಾಮಾವಶೇಷವಿಲ್ಲದಂತಾಗಿದ್ದವು. ನ್ಯೂಕ್ಲಿಯರ್‌ ಆಯುಧಗಳು ಪ್ರಪಂಚದಲ್ಲೇ ಅತ್ಯಂತ ವಿನಾಶಕ ಅಯುಧಗಳೆಂದು ಗುರುತಿಸಲಾಗಿದೆ.

ಅಣ್ವಾಯುಧಗಳು ಅಂದರೆ ಏನು..?

     ಅವು ಅತ್ಯಂತ ಶಕ್ತಿಯುವ ಸ್ಫೋಟಕ ವಸ್ತುಗಳು. ಸೈನ್ಸ್‌ ಪಾಠಗಳಲ್ಲಿ ಆಟಂ, ಐಸೋಟೋಪ್‌ ಎಂಬ ಪದಗಳನ್ನು ನೀವು ಕೇಳೇ ಇರ್ತೀರಿ. ನ್ಯೂಕ್ಸಿಯರ್‌ ಬ್ಲಾಸ್ಟ್‌ ಇದರಿಂದಲೇ ಆಗುತ್ತದೆ. ಪರಮಾಣು ಶಕ್ತಿಯನ್ನು ವಿಸ್ಫೋಟಿಸುವ ಮೂಲಕ ಭಾರೀ ಪ್ರಮಾಣದಲ್ಲಿ ಸ್ಫೋಟ ಉಂಟು ಮಾಡುವ ಬಾಂಬ್‌ಗಳನ್ನು ಇದರಿಂದ ತಯಾರು ಮಾಡುತ್ತಾರೆ. ಅದಕ್ಕಾಗಿಯೇ ಇದನ್ನು ಅಣು ಬಾಂಬ್‌ ಎಂದು ಕರೆಯುತ್ತಾರೆ. ನ್ಯೂಕ್ಲಿಯರ್‌ ಅಯುಧಗಳು ಹೆಚ್ಚಿನ ಪ್ರಮಾಣದಲ್ಲಿ ರೇಡಿಯೇಷನ್‌ ನ್ನು ಬಿಡುಗಡೆ ಮಾಡುತ್ತವೆ. ಆದ್ದರಿಂದ ಸ್ಫೋಟ ನಡೆದ ಸಮಯಕ್ಕಿಂತ ಅನಂತರ ಉಂಟಾಗುವ ದುಷ್ಪರಿಣಾಮಗಳು ದೀರ್ಘಕಾಲ ಇರುತ್ತವೆ.

ಎಷ್ಟು ದೇಶಗಳ ಬಳಿ ಅಣ್ವಾಯುಧಗಳಿವೆ..?

ಜನವರಿ 2021 ಕ್ಕೆ ಪ್ರಪಂಚದಲ್ಲಿ ಒಂಬತ್ತು ದೇಶಗಳು ಅಣ್ವಸ್ತ್ರಗಳನ್ನು ಹೊಂದಿವೆ.  ಅಮೆರಿಕ, ಯುಕೆ, ರಷ್ಯಾ, ಚೈನಾ, ಭಾರತ, ಪಾಕಿಸ್ತಾನ, ಇಸ್ರೇಲ್‌, ಉತ್ತರ ಕೊರಿಯಾಗಳ ಬಳಿ ಅಣ್ವಸ್ತ್ರಗಳಿವೆ.

 

ಯಾವ ದೇಶದ ಬಳಿ ಎಷ್ಟು ಅಣುಬಾಂಬ್‌ಗಳಿವೆ..?

ದಿ ಸ್ಟಾಕ್‌ಹೂಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಪ್ರಕಾರ, 2021 ಜನವರಿವರೆಗೆ ಪ್ರಪಂಚದಾದ್ಯಂತ 13080 ಅಣ್ವಸ್ತ್ರಗಳಿವೆ. ಆದ್ರೆ ಇದ್ರಲ್ಲಿ 3825 ಅಣ್ವಸ್ತ್ರಗಳು ಮಾತ್ರ ತಕ್ಷಣವೇ ಉಪಯೋಗಿಸುವುದಕ್ಕೆ ಸಿದ್ಧವಾಗಿವೆ. ಇಂತಹವು ಅಮೆರಿಕ ಬಳಿ 1800, ರಷ್ಯಾ ಬಳಿ 1625, ಫ್ರಾನ್ಸ್‌ ಬಳಿ 280, ಬ್ರಿಟನ್‌ ಬಳಿ 120 ಇವೆ.  ರಷ್ಯಾ ಬಳಿ ಅತ್ಯಧಿಕವಾಗಿದ್ದರೆ, ಉತ್ತರ ಕೊರಿಯಾ ಬಳಿ ಅತ್ಯಂತ ಕಡಿಮೆ ಅಣು ಬಾಂಬ್‌ಗಳಿವೆ. ರಷ್ಯಾ ಬಳಿ 6255 ಅಣು ಬಾಂಬ್‌ಗಳಿವೆ, ಅಮೆರಿಕ ಬಳಿ 5550, ಚೈನಾ ಬಳಿ 350, ಫ್ರಾನ್ಸ್‌ ಬಳಿ 290, ಬ್ರಿಟನ್‌ ಬಳಿ 225, ಪಾಕಿಸ್ತಾನದ ಬಳಿ 165, ಇಸ್ರೇಲ್‌ ಬಳಿ 90 ಅಣುಬಾಂಬ್‌ಗಳಿವೆ. ಉತ್ತರ ಕೊರಿಯಾ ಬಳಿ 40 ರಿಂದ 50 ಅಣ್ವಸ್ತ್ರಗಳಿರಬಹುದು ಎಂದು ಹೇಳಲಾಗಿದೆ.

Share Post