International

ನಟ ಸಂಜತ್‌ದತ್‌-ಪಾಕ್‌ ಮಾಜಿ ಅಧ್ಯಕ್ಷ ಮುಷರಫ್‌ ಭೇಟಿ; ಫೋಟೋ ಎಲ್ಲೆಡೆ ವೈರಲ್‌

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ ಹಾಗೂ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಪ್‌ ಭೇಟಿಯಾಗಿರುವ ಬಗ್ಗೆ ಸುದ್ದಿಯಾಗಿದೆ. ದುಬೈನಲ್ಲಿ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದು, ಅದರ ಫೋಟೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಮುಷರಫ್‌ ಅವರು 2016ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಯುಎಇಗೆ ತೆರಳಿದ್ದರು. ಬಳಿಕ ಪಾಕಿಸ್ತಾನಕ್ಕೆ ಹಿಂತಿರುಗಿಲ್ಲ. ಅವರು ವೀಲ್‌ಚೇರ್‌ ಒಂದರಲ್ಲಿ ಕುಳಿತಿದ್ದು, ಅವರ ಬಳಿ ಸಂಜಯ್‌ ದತ್‌ ನಿಂತಿರುವ ಫೋಟೋ ವೈರಲ್‌ ಆಗಿದೆ. ಈ ಭೇಟಿ ಆಕಸ್ಮಿಕ ಎಂದು ಹೇಳಲಾಗುತ್ತಿದೆ. ಆದ್ರೆ ಈ ಭೇಟಿ ಯಾವಾಗ ಆಗಿದ್ದು, ಏಕೆ ಆಯಿತು..? ಇಬ್ಬರೂ ಏನನ್ನು ಚರ್ಚೆ ಮಾಡಿದರು..? ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Share Post