CrimeInternational

100 ಅಡಿ ಕಂದಕಕ್ಕೆ ಉರುಳಿಬಿತ್ತು ಬಸ್‌; 17 ಪ್ರಯಾಣಿಕರ ದುರ್ಮರಣ

ಫಿಲಿಪೈನ್ಸ್‌; ಬಸ್‌ ಬ್ರೇಕ್‌ ಫೇಲ್‌ ಆಗಿ 100 ಅಡಿ ಕಂದಕಕ್ಕೆ ಉರುಳಿಬಿದ್ದಿರುವ ದಾರುಣ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. 8 ಮಂದಿ ಸ್ಥಿತಿ ಗಂಭೀರವಾಗಿದ್ದು, ಉಳಿದ ನಾಲ್ವರ ಆರೋಗ್ಯ ಸ್ಥಿರವಾಗಿದೆ. ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಇಲಾಯ್ಲೋ ಪ್ರಾಂತ್ಯದಿಂದ ಬಸ್‌ ಹೊರಟಿತ್ತು. ಆಂಟಿಕಲ್​ ಕುಲಾಸಿ ಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ ಬಸ್‌ ಬ್ರೇಕ್‌ ಫೇಲ್‌ ಆಗಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಒಂದು ಮಗು ಕೂಡಾ ಸೇರಿದೆ

ಈ ರಸ್ತೆಯಲ್ಲಿ ಆಗಾಗ ಇಂತಹ ದುರಂತಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಲಾಗಿದೆ.

 

Share Post