ಭಾರತ-ಚೀನಾ ಗಡಿ ಉದ್ನಿಗ್ನ; ಶಮನಕ್ಕೆ ವಿಶ್ವಸಂಸ್ಥೆ ಕರೆ
ನವದೆಹಲಿ; ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ನಡೆದಿತ್ತು. ಗಡಿಯಲ್ಲಿ ಈ ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.
ಡಿ.9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಎಲ್ಎಸಿ ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ಸೈನಿಕರು ಸತತ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸನದಕ್ಕೆ ಮಾಹಿತಿ ನೀಡಿದ್ದರು. ಇನ್ನು ಭಾರತದ ಸೈನಿಕರು ಚೀನಾದ ಸೈನಿಕರಿಗೆ ದಿಟ್ಟ ಉತ್ತರ ನೀಡಿ ಹಿಮ್ಮೆಟ್ಟಿಸಿದ್ದರು. ಇದರ ಮಾಹಿತಿಯನ್ನೂ ರಾಜನಾಥ್ ಸಿಂಗ್ ಸದನಕ್ಕೆ ತಿಳಿಸಿದ್ದರು.
ಈ ವಿಷಯದ ಬಗ್ಗೆ ಈ ವಿಶ್ವಸಂಸ್ಥೆ ಪ್ರಸ್ತಾಪ ಮಾಡಿದೆ. ನಾವು ಈ ಕುರಿತಾದ ವರದಿಗಳನ್ನು ನೋಡಿದ್ದೇವೆ. ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯಬೇಕಿದೆ. ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಎರಡೂ ದೇಶಗಳಿಗಳಿಗೆ ಕರೆ ನೀಡಿದೆ.