ಸರ್ಕಾರದಿಂದಲೇ ಅವಿವಾಹಿತರಿಗಾಗಿ ಡೇಟಿಂಗ್ ಆಪ್; ಮದುವೆಯಾಗ್ರೀ ಪ್ಲೀಸ್..
ಟೋಕಿಯೋ; ಪ್ರಪಂಚದಲ್ಲಿ ಖಾಸಗಿ ಡೇಟಿಂಗ್ ಮೊಬೈಲ್ ಆಪ್‌ಗಳು ಸಾಕಷ್ಟಿವೆ.. ಆದ್ರೆ ಸರ್ಕಾರವೇ ಡೇಟಿಂಗ್ ಆಪ್ ಮಾಡಿದ್ದ ಉದಾಹರಣೆ ಇಲ್ಲ.. ಆದ್ರೆ ಜಪಾನ್ ಸರ್ಕಾರ ಇಂತಹದ್ದೊಂದು ಸೌಲಭ್ಯವನ್ನು ತನ್ನ ಜನರಿಗಾಗಿ ಒದಗಿಸಿಕೊಟ್ಟಿದೆ.. ಅವಿವಾಹಿತರು ತನ್ನ ಸಂಗಾತಿಯನ್ನು ಹುಡುಕಿಕೊಂಡು ಸಂಸಾರ ನಡೆಸುವುದನ್ನು ಉತ್ತೇಜಿಸಲು ಜಪಾನ್ ಸರ್ಕಾರವೇ ಡೇಟಿಂಗ್ ಆಪ್ ಒಂದನ್ನು ಪರಿಚಯಿಸಿದೆ.. ಅದರ ಹೆಸರು ʻಟೋಕಿಯೋ ಫುಟಾರಿ ಸ್ಟೋರಿʼ..
ಟೋಕಿಯೋ ಫುಟಾರಿ ಸ್ಟೋರಿ ಮೂಲಕ ಸಂಗಾತಿಗಳನ್ನು ಹುಡುಕಿಕೊಂಡು ಬೇಗ ಮದುವೆಯಾಗಿ ಸಂಸಾರ ನಡೆಸಿ ಎಂದು ಜಪಾನ್ ಸರ್ಕಾರ ತನ್ನ ದೇಶದ ಅವಿವಾಹಿತರಿಗೆ ಕರೆ ಕೊಟ್ಟಿದೆ.. ಜಪಾನ್ ನಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚಾಗುತ್ತಿದೆ.. ಇದರಿಂದಾಗಿ ಜನಸಂಖ್ಯೆ ಕೂಡಾ ಕಡಿಮೆಯಾಗುತ್ತಿದೆ.. ಇದರಿಂದಾಗಿ ಮುಂದೊಂದು ದಿನ ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು.. ಹೀಗಾಗಿ ಮದುವೆ ಎಂದರೆ ನಿರ್ಲಕ್ಷ್ಯ ತೋರುತ್ತಿರುವ ಯುವ ಜನರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರವೇ ಈ ಡೇಟಿಂಗ್ ಅಪ್ಲಿಕೇಷನ್ ಪರಿಚಯಿಸಿದೆ..
ಜಪಾನ್‌ನಲ್ಲಿ 50 ವರ್ಷ ಮೀರಿದ ಸುಮಾರು ಶೇಕಡಾ 32ರಷ್ಟು ಪುರುಷರು ಹಾಗೂ 24ರಷ್ಟು ಮಹಿಳೆಯರು ಇನ್ನೂ ಮದುವೆಯಾಗಿಲ್ಲ.. ನಮಗೆ ಮದುವೆ ಬೇಡ ಎನ್ನುತ್ತಿದ್ದಾರೆ.. ಇದು ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.. ಹೀಗಾಗಿ ಸರ್ಕಾರವೇ ಅವಿವಾಹಿತರಿಗೆ ಉತ್ತೇಜನ ನೀಡಿ ಮದುವೆ ಮಾಡಿಕೊಳ್ಳುವಂತೆ ಹೇಳುತ್ತಿದೆ.. ಅದರ ಭಾಗವಾಗಿ ಈ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಲಾಗಿದೆ..