ರಷ್ಯಾ ಸೇನೆ ಹತ್ತಿಕ್ಕಲು ಉಕ್ರೇನ್ ಸರ್ಕಾರ ಮತ್ತೊಂದು ಕ್ರಮ- ಜೈಲಿನಿಂದ ಕೈದಿಗಳ ಬಿಡುಗಡೆ
ಉಕ್ರೇನ್: ರಷ್ಯಾವನ್ನು ಎದುರಿಸಲು ಉಕ್ರೇನ್ ಮತ್ತೊಂದು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಸೇನಾ ಹಿನ್ನೆಲೆಯುಳ್ಳವರು ಮತ್ತು ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವವರು ಹಾಗೂ ವಿವಿಧ ಅಪರಾಧಗಳಲ್ಲಿ ಜೈಲಿನಲ್ಲಿರುವವರನ್ನು ಹೋರಾಟಕ್ಕೆ ಸಿದ್ಧಗೊಳಿಸುತ್ತಿದೆ ಉಕ್ರೇನ್ ಸೇನೆ. ಸೆರೆಮನೆಯಿಂದ ಕೈದಿಗಳನ್ನು ಬಿಡುಗಡೆ ಮಾಡಿ ಯುದ್ಧದಲ್ಲಿ ಭಾಗವಹಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗುತ್ತಿದೆ. ಜೈಲುಗಳಲ್ಲಿರುವ ಕೈದಿಗಳು ತಮ್ಮ ದೇಶಕ್ಕಾಗಿ ಹೋರಾಡಲು ಸಿದ್ಧ ಎಂದಿದ್ದಾರೆ. ಹೀಗಾಗಿ ಉಕ್ರೇನಿಯನ್ ಸರ್ಕಾರವು ಜೈಲುಗಳಿಂದ ಕೈದಿಗಳನ್ನು ಬಿಡುಗಡೆ ಮಾಡುತ್ತಿದೆ. ಹೀಗೆ ಬಿಡುಗಡೆಯಾದವರು ರಷ್ಯಾ ವಿರುದ್ಧದ ಹೋರಾಟಕ್ಕೆ ಸೇರುತ್ತಾರೆಂದು ರಾಷ್ಟ್ರೀಯ ಪ್ರಾಸಿಕ್ಯೂಟರ್ ಜನರಲ್ ಕಚೇರಿ ದೃಢಪಡಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಐದು ದಿನಗಳಿಂದ ಮುಂದುವರಿಯುತ್ತಿದೆ. ಒಂದೆಡೆ ಬೆಲಾರಸ್ ನಲ್ಲಿ ಮಾತುಕತೆ ನಡೆಸಿ, ಇನ್ನೊಂದೆಡೆ ಯುದ್ಧವನ್ನು ನಿಲ್ಲಿಸದೆ ಮುಂದುವರಿಸುತ್ತಿದೆ. ರಾಜಧಾನಿ ಕೀವ್ ಅನ್ನು ರಷ್ಯಾದ ಕೈ ವಶ ಮಾಡಿಕೊಳ್ಳದಂತೆ ಉಕ್ರೇನ್ ತಡೆಯುತಿದೆ. ಕೀವ್ ನಮ್ಮ ನಿಯಂತ್ರಣದಲ್ಲಿದೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ಕೀವ್ ಅನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಉಕ್ರೇನಿಯನ್ ಸೈನಿಕರ ಹೊಡೆತದ ಭಯದಿಂದ ರಷ್ಯಾದ ಮಿಲಿಟರಿ ಮಾನಸಿಕ ಸ್ಥೈರ್ಯ ಕಳೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.