BusinessInternational

ಹಳೇ ಬಟ್ಟೆಗಳ ಮಾರಾಟ ಆರಂಭಿಸಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ!

ಜೀವನದಲ್ಲಿ ದೊಡ್ಡ ಯಶಸ್ಸು ಸಿಗಬೇಕು ಅಂದ್ರೆ ಹೊಸ ರೀತಿಯಲ್ಲಿ ಯೋಚನೆ ಮಾಡಬೇಕು.. ಎಲ್ಲರೂ ಮಾಡುವಂತದ್ದು ಬಿಟ್ಟು ಏನಾದರೂ ಹೊಸದೊಂದರ ಆವಿಷ್ಕಾರ ಮಾಡಬೇಕು.. ಅದು ಜನರನ್ನು ಆಕರ್ಷಿಸುವಂತಿರಬೇಕು.. ಆಗ ಮಾತ್ರ ದೊಡ್ಡ ಯಶಸ್ಸು ಸಾಧ್ಯ.. ಇತರರಂತೆ ಯೋಚಿಸೋದನ್ನು ಬಿಟ್ಟು ಹೊಸ ರೀತಿಯಲ್ಲಿ ಯೋಚನೆ ಮಾಡಿದರೆ ಯಶಸ್ಸು, ಹಣ ಎರಡೂ ನಿಮ್ಮದಾಗುತ್ತದೆ.. ಇದಕ್ಕೊಂದು ಉದಾಹರಣೆಯಾಗಿ ನಮಗೊಂದು ಮಹಿಳೆಯ ಸಾಧನೆಯನ್ನು ವಿವರಿಸುತ್ತಿದ್ದೇನೆ..

ಇದನ್ನೂ ಓದಿ; ಬಿಳಿ ಉಪ್ಪು, ಪಿಂಕ್‌ ಸಾಲ್ಟ್‌ ಹಾಗೂ ಬ್ಲ್ಯಾಕ್‌ ಸಾಲ್ಟ್‌ ನಡುವಿನ ವ್ಯತ್ಯಾಸವೇನು..?; ಯಾವುದು ಬೆಸ್ಟ್‌..?

ಇಲ್ಲೊಬ್ಬ ಮಹಿಳೆ ಯಾರೂ ಯೋಚನೆ ಮಾಡದಂತಹದ್ದನ್ನು ಮಾಡಿದ್ದಾಳೆ.. ಯಾರೂ ಊಹೆಯೂ ಮಾಡದಂತಹ ಉದ್ಯಮವನ್ನು ಆರಂಭಿಸಿದ್ದಾಳೆ.. ಶುರು ಮಾಡುವಾಗ ಎಲ್ಲರೂ ಆಕೆಯನ್ನು ಮೂದಲಿಸಿದರೆ, ಆಕೆ ಮಾತ್ರ ಸೈಲೆಂಟಾಗಿ ಆ ಉದ್ಯಮ ಪ್ರಾರಂಭಿಸಿ ದೊಡ್ಡ ಯಶಸ್ಸು ಕಂಡಿದ್ದಾಳೆ.. ಆ ಮಹಿಳೆಯೇ ಯುಕೆಯ ಹನ್ನಾ ಎಂಬಾಕೆ.. ಈಕೆ ಬಳಸಿದ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮೊತ್ತದಲ್ಲಿ ಹಣ ಗಳಿಸುತ್ತಿದ್ದಾಳೆ..
ಬಿಸಾಡಿದ ಬಟ್ಟೆಯಿಂದ ಹಣ ಗಳಿಸುವುದು ಹೇಗೆ ಎಂಬ ಕುರಿತು ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಹನ್ನಾ ಅವರು ಬಳಸಿದ ಬಟ್ಟೆಗಳು, ಆಭರಣಗಳು ಮತ್ತು ಬೂಟುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾರೆ.. ಪ್ಲೇಸ್ ವಿಂಟೇಜ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಶುರು ಮಾಡಿದ ಹನ್ನಾ, ಅನೇಕ ಮಂದಿ ಸಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಖರೀದಿ ಮಾಡುತ್ತಾರೆ ಎಂದು ಗೊತ್ತಾದ ಮೇಲೆ ಅದನ್ನು ಮತ್ತಷ್ಟು ವಿಸ್ತರಿಸಿದರು.. ಕೆಲವರು ಬಳಸಿದ ಬಟ್ಟೆ, ಆಭರಣ, ಚಪ್ಪಲಿಗಳನ್ನು ಖರೀದಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಆರಂಭಿಸಿದರು.
ಇದನ್ನೂ ಓದಿ; ಹಣ ಉಳಿತಾಯ ಮಾಡುವವರಿಗೆ ರಾತ್ರಿ ಕಣ್ತುಂಬ ನಿದ್ದೆ ಬರುತ್ತಂತೆ..!

ಈ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟಗಾರರಿಗೆ ಯಾವುದೇ ಶುಲ್ಕಗಳಿಲ್ಲ. ಆದರೆ ಖರೀದಿದಾರರು ಸ್ವಲ್ಪ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ವ್ಯವಹಾರದಿಂದ ತಾನು ರೂ.6,44,330 ಗಳಿಸಿದ್ದೇನೆ ಎಂದು ಹನ್ನಾ ಬಹಿರಂಗಪಡಿಸಿದ್ದಾರೆ.

Share Post