ಮ್ಯಾನ್ಮಾರ್‌ನ ನಿರಾಶ್ರಿತರ ಶಿಬಿರದ ಮೇಲೆ ಫಿರಂಗಿ ದಾಳಿ; 29 ಮಂದಿ ದುರ್ಮರಣ
ಮ್ಯಾನ್ಮಾರ್; ಈಶಾನ್ಯ ಮ್ಯಾನ್ಮಾರ್‌ನ ನಿರಾಶ್ರಿತರ ಶಿಬಿರದ ಮೇಲೆ ನಡೆದ ಫಿರಂಗಿ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ. ಇನ್ನೂ 56 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 44 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲೈಜಾ ಬಳಿ ಇರುವ ಈ ನಿರಾಶ್ರಿತರ ಶಿಬಿರವು ಕಚಿನ್ ಇಂಡಿಪೆಂಡೆನ್ಸ್ ಆರ್ಮಿ (ಕೆಐಎ) ನಿಯಂತ್ರಣದಲ್ಲಿದೆ. ಮೃತರಲ್ಲಿ 11 ಮಂದಿ ಮಕ್ಕಳು ಎಂದು ಕಚಿನ್ ಅಧಿಕಾರಿಗಳು ತಿಳಿಸಿದ್ದಾರೆ. ಕಚಿನ್ ಮ್ಯಾನ್ಮಾರ್‌ನ ಅತ್ಯಂತ ಶಕ್ತಿಶಾಲಿ ಬಂಡುಕೋರ ಗುಂಪುಗಳಲ್ಲಿ ಒಂದಾಗಿದೆ, ಇದು ವರ್ಷಗಳಿಂದ ಮಿಲಿಟರಿಯೊಂದಿಗೆ ಘರ್ಷಣೆಯಾಗಿದೆ. ಆದರೆ, ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಮ್ಯಾನ್ಮಾರ್ ಸೇನೆ ಘೋಷಿಸಿದೆ.