International

UKRAINE-RUSSIA WAR; ಯುದ್ಧಕ್ಕೆ ಮುನ್ನಾ ದಿನ ಉಕ್ರೇನ್‌ ಯುವತಿ ಜೊತೆ ಮದುವೆ; ಹೈದರಾಬಾದ್‌ನಲ್ಲಿ ರಿಸೆಪ್ಷನ್‌

ಹೈದರಾಬಾದ್‌: ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಇದಕ್ಕೂ ಮೊದಲು ಭಾರತದ ಯುವಕನೊಂದಿಗೆ ಉಕ್ರೇನ್‌ ಯುವತಿಗೆ ಪ್ರೇಮಾಂಕುರವಾಗಿದ್ದು, ರಷ್ಯಾ ಮಿಲಿಟರಿ ಉಕ್ರೇನ್‌ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ದಿನ ಇಬ್ಬರ ಮದುವೆ ಉಕ್ರೇನ್‌ನಲ್ಲಿ ನಡೆದಿದೆ. ಇನ್ನೂ ವಿಶೇಷವೆಂದರೆ ನವಜೋಡಿ ಯುದ್ಧದ ಸಂಕಷ್ಟದಲ್ಲಿ ಸಿಲುಕದೇ ಸೇಫಾಗಿ ಅಂದೇ ಭಾರತಕ್ಕೆ ಆಗಮಿಸಿದ್ದಾರೆ.

ಯುವಕ ಪ್ರತೀಕ್‌ ಹೈದರಾಬಾದ್‌ ಮೂಲದವರಾಗಿದ್ದು, ಉಕ್ರೇನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉಕ್ರೇನ್‌ನ ಯುವತಿ ಲುಬೋವ್‌ ಜೊತೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಅವರಿಬ್ಬರು ಫೆಬ್ರವರಿ 23 ರಂದು ಉಕ್ರೇನ್‌ನಲ್ಲಿ ಮದುವೆಯಾಗಿದ್ದರು. ಅನಂತರ ಹೈದರಾಬಾದ್‌ಗೆ ಆಗಮಿಸಿದ್ದರು. ನಿನ್ನೆ ಅವರ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆಯಿತು. ಹಿಂದೂ ಸಂಪ್ರದಾಯದಂತೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಬಂಧುಗಳು, ಸ್ನೇಹಿತರು ಪಾಲ್ಗೊಂಡಿದ್ದರು.

Share Post