ಬುಕಾರೆಸ್ಟ್‌ನಿಂದ ಭಾರತಕ್ಕೆ ಬಂದ ಮತ್ತೊಂದು ವಿಮಾನ-218ವಿದ್ಯಾರ್ಥಿಗಳು ವಾಪಸ್ ತಾಯ್ನಾಡಿಗೆ
ದೆಹಲಿ: ರಷ್ಯಾ ಉಕ್ರೇನ್ ನಡುವೆ ಯುದ್ಧ ನಿಲ್ಲುವ ಹಾಗರ ಕಾಣ್ತಿಲ್ಲ. ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯೌನ್ನು ಕೇಂದ್ರ ಸರ್ಕಾರ ಅತ್ಯಂತ ವೇಗವಾಗಿ ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕೂಡಾ ಏರ್ ಇಂಡಿಯಾ ವಿಮಾನ ದೆಹಲಿಗೆ ಬಂದಿದಿಳಿದೆ.
ಬುಕಾರೆಸ್ಟ್‌ನಿಂದ 218 ಭಾರತೀಯರನ್ನು ಹೊತ್ತ ವಿಮಾನ ಇಂದು ಬುಧವಾರ, ಮಾರ್ಚ್ 2 ಬೆಳಿಗ್ಗೆ ದೆಹಲಿಗೆ ಬಂದಿಳಿದಿದೆ. ಹಿಂದಿರುಗಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಅಶ್ವಿನಾ ವೈಷ್ಣವ್ ಸ್ವಾಗತಿಸಿದರು. ಮತ್ತೊಂದೆಡೆ 437 ಭಾರತೀಯರನ್ನು ಹೊತ್ತ ವಿಶೇಷ ವಿಮಾನಗಳು ಈಗಾಗಲೇ ಪೋಲೆಂಡ್‌ನಿಂದ ದೆಹಲಿಗೆ ತೆರಳಿವೆ. ಹಂಗೇರಿಯಿಂದ ಸಹ 222 ಭಾರತೀಯರಿರುವ ವಿಮಾನ ದೆಹಲಿಗೆ ಬರಲಿದೆ.
ಕೇಂದ್ರ ಸಚಿವರಾದ ವಿಕೆ ಸಿಂಗ್, ಹರ್ದೀಪ್ ಸಿಂಗ್ ಪುರಿ, ಜ್ಯೋತಿ ರಾದಿತ್ಯ ಮತ್ತು ಕಿರಣ್ ರಿಜು ಅವರು ಹಂಗೇರಿ, ರೊಮೇನಿಯಾ, ಪೋಲೆಂಡ್ ಮತ್ತು ಸ್ಲೋವಾಕ್ ಗಣರಾಜ್ಯದಂತಹ ದೇಶಗಳಿಂದ ಭಾರತೀಯರನ್ನು ಸ್ವದೇಶಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.