CrimeInternational

ಪತ್ನಿಯ ಮೇಲೆ ಅತ್ಯಾಚಾರ ಎಸಗಲು 72 ಮಂದಿಗೆ ಆಹ್ವಾನಿಸಿದ ವ್ಯಕ್ತಿ!

ಪ್ಯಾರಿಸ್‌; ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗುವಂತೆ ವ್ಯಕ್ತಿಯೊಬ್ಬ 72 ಮಂದಿಯನ್ನು ಆಹ್ವಾನಿಸಿರುವ ಘಟನೆ ನಡೆದಿದೆ.. ಫ್ರಾನ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಕೊನೆಗೂ ಪಾಪಿ ಪತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.. ಆದ್ರೆ ಈಗಾಗಲೇ ಪತಿಗೆ ವಿಚ್ಛೇದನ ನೀಡಿರುವ ಪತ್ನಿ ಆತನ ಕ್ಷಮೆಯನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾಳೆ..
ಕಳೆದ ಒಂದು ದಶಕದಲ್ಲಿ ನನ್ನ ಪತಿ ಡೊಮಿನಿಲ್‌ ಪೆಲಿಕಾಟ್‌ 72 ಜನರನ್ನು ನನ್ನ ಮೇಲೆ ಅತ್ಯಾಚಾರ ಎಸಗಲು ಆಹ್ವಾನ ಕೊಟ್ಟಿದ್ದ ಎಂದು ಮಹಿಳೆ ಗಿಸೆಲ್‌ ಪೆಲಿಕಾಟ್‌ ಹೇಳಿಕೊಂಡಿದ್ದಾಳೆ.. ನನಗೆ ಆತ ಮಾದಕ ದ್ರವ್ಯಗಳನ್ನು ನೀಡಿ ಮತ್ತು ಬರುವಂತೆ ಮಾಡುತ್ತಿದ್ದ.. ಅನಂತರ ಆತ ನನ್ನ ಮೇಲೆ ಅತ್ಯಾಚಾರ ಮಾಡಿಸುತ್ತಿದ್ದ.. ಆತನ ಸ್ನೇಹಿತರು ದಿನವೂ ಬಂದು ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದರು.. ಅದನ್ನು ನೋಡಿ ನನ್ನ ಪತಿ ವಿಕೃತ ಆನಂದಪಡುತ್ತಿದ್ದ ಎಂದು ಮಹಿಳೆ ತನ್ನ ಗೋಳು ತೋಡಿಕೊಂಡಿದ್ದಾಲೆ..
ಇನ್ನು ಮಹಿಳೆ ತನ್ನ ಪತಿಗೆ ವಿಚ್ಛೇದನ ನೀಡಿ ಬೇರೆ ಕಡೆ ವಾಸಿಸುತ್ತಿದ್ದಾಳೆ.. ಜೊತೆಗೆ ಆತನ ವಿರುದ್ಧ ಕೋರ್ಟ್‌ನಲ್ಲಿ ದಾವೆ ಕೂಡಾ ಹೂಡಿದ್ದಾಳೆ.. ಆರೋಪ ಸಾಬೀತಾಗಿರುವುದರಿಂದ ಆತನಿಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.. ಹೀಗಿರುವಾಗಲೇ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕ್ಷಮೆಯಾಚಿಸಿದ್ದಾನೆ.. ಆದ್ರೆ ಪತ್ನಿ ಮಾತ್ರ ನೀನು ಕ್ಷಮೆ ಅರ್ಹನೇ ಅಲ್ಲ.. ನಿನ್ನನ್ನು ಕ್ಷಮಿಸೋದಿಲ್ಲ ಎಂದು ಹೇಳಿಬಿಟ್ಟಿದ್ದಾಳೆ..

Share Post