International

UKRAIN-RUSSIA WAR; ರಷ್ಯಾ ವಿರುದ್ಧ ಉಕ್ರೇನ್‌ ಪ್ರತಿ ದಾಳಿ; ಐದು ಫೈಟರ್‌ ಜೆಟ್‌ಗಳು ಉಡೀಸ್‌

ಉಕ್ರೇನ್‌: ರಷ್ಯಾ ದಾಳಿಗೆ ಪ್ರತಿಯಾಗಿ ಉಕ್ರೇನ್‌ ಸೈನಿಕರು ಕೂಡಾ ಪ್ರತಿದಾಳಿ ನಡೆಸುತ್ತಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದು, ರಷ್ಯಾ ಸೈನಿಕರು ಉಕ್ರೇನ್‌ ವಾಯನೆಲೆಗಳನ್ನು ಧ್ವಂಸಗೊಳಿಸುತ್ತಿದ್ದಾರೆ. ಇದಕ್ಕಾಗಿ ಕ್ಷಿಪಣಿಗಳು,  ಫೈಟರ್‌ ಜೆಟ್‌ಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದ್ದಾರೆ. ಇತ್ತ ಉಕ್ರೇನ್‌ ಕೂಡಾ ಕ್ಷಿಪಣಿಗಳನ್ನು ಬಳಸಿ ಪ್ರತಿದಾಳಿ ನಡೆಸುತ್ತಿದೆ.

ಈಗಾಗಲೇ ಉಕ್ರೇನ್‌ ಸೈನಿಕರು, ರಷ್ಯಾಗೆ ಸೇರಿದ ಐದು ಜೆಟ್‌ ಹಾಗೂ ಒಂದು ಹೆಲಿಕಾಪ್ಟರ್‌ ಹೊಡೆದುರುಳಿಸಿದ್ದಾರೆ.

Share Post