International

ಇರಾನ್‌ ಬಂದರಿನ ಬಳಿ ಮುಳುಗಿದ ಯುಎಇ ಸರಕು ಸಾಗಾಣೆ ಹಡಗು: ಭರದಿಂದ ಸಾಗಿದ ರಕ್ಷಣಾ ಕಾರ್ಯ

ಇರಾನ್:‌  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸೇರಿದ ಸರಕು ಹಡಗು ಇರಾನ್‌ನ ಅಸ್ಸಾಲುಯೆಹ್ ಬಂದರಿನ ಬಳಿ ಮುಳುಗಿದೆ ಮಾಹಿತಿ ಹೊರಬಿದ್ದಿದೆ. ಇರಾನಿನ ಅಸ್ಸಾಲು ಬಂದರಿನಿಂದ 30 ಮೈಲಿ ದೂರದಲ್ಲಿ ‘ಅಲ್ ಸಾಲ್ಮಿ 6’ ಸರಕು ಸಾಗಣೆ ಹಡಗು ಮುಳುಗಿದೆ ಎಂದು ಸೇಲಂ ಅಲ್ ಮಕ್ರಾನಿ ಕಾರ್ಗೋ ಕಂಪನಿಯ ಕಾರ್ಯಾಚರಣೆ ವ್ಯವಸ್ಥಾಪಕ ಕ್ಯಾಪ್ಟನ್ ನಿಜಾರ್ ಖದ್ದೌರಾ ಖಚಿತಪಡಿಸಿದ್ದಾರೆ.

ಮುಳುಗಿದ ಹಡಗಿನಲ್ಲಿ 30 ಸಿಬ್ಬಂದಿ ಇದ್ದರು ಎನ್ನಲಾಗ್ತಿದೆ.ರಕ್ಷಣಾ ತಂಡದಿಂದ 16 ಮಂದಿಯನ್ನು ರಕ್ಷಿಸಲಾಗಿದ್ದು, 11 ಮಂದಿ ಲೈಫ್ ಬೋಟ್ ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಡಗು ಮುಳುಗಿದ ಘಟನೆಯಲ್ಲಿ ಒಬ್ಬನನ್ನು ಸಮುದ್ರದಿಂದ ರಕ್ಷಿಸಲಾಗಿದ್ದು, ಇನ್ನಿಬ್ಬರು ನೀರಿನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ

ಸಮುದ್ರದಲ್ಲಿ ಮುಳುಗಿರುವ ಸರಕು ಸಾಗಣೆ ಹಡಗಿನ ಸಿಬ್ಬಂದಿಯನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಇರಾನ್  ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಹವಾಮಾನ ವೈಪರೀತ್ಯದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಡಗಿನ ಎಲ್ಲಾ ಸಿಬ್ಬಂದಿ ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು ಎನ್ನಲಾಗ್ತಿದೆ.

Share Post