CrimeInternational

9 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶ

ಮುಂಬೈ; ಟ್ಯಾಕ್ಸ್‌ ಕಟ್ಟದೆ ಅಕ್ರಮವಾಗಿ ಭಾರತಕ್ಕೆ ತಂದಿದ್ದ 16 ಕೆಜಿ ಚಿನ್ನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಇಥಿಯೋಪಿಯಾದಿಂದ ಭಾರತಕ್ಕೆ ಚಿನ್ನ ತಂದಿದ್ದ. ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಮುಂಬೈ ಏರ್​ಪೋರ್ಟ್ ಭಾರತೀಯ ಪ್ರಜೆಯೊಬ್ಬ ಬಂದಿದ್ದ. ಆತ 8.40 ಕೋಟಿ ರೂಪಾಯಿ ಮೌಲ್ಯದ 16 ಕೆಜಿ ಚಿನ್ನವನ್ನು ತನ್ನ ಜೊತೆ ತಂದಿದ್ದಾನೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಸೊಂಟದ ಬೆಲ್ಟ್‌ನಲ್ಲಿ ಈ ಚಿನ್ನದ ಅಡಗಿಸಿಡಲಾಗಿತ್ತು. ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಚಿನ್ನ ಸಿಕ್ಕಿದೆ. ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.

Share Post