International

ಟೇಕಾಫ್‌ ವೇಳೆ ಅಗ್ನಿ ಅನಾಹುತ; ಹೊತ್ತಿ ಉರಿದ ಟಿಬೆಟ್‌ ಏರ್‌ಲೈನ್ಸ್‌

ಬೀಜಿಂಗ್; ಚೀನಾದಲ್ಲಿ ಮತ್ತೊಂದು ವಿಮಾನ ದುರಂತಕ್ಕೀಡಾಗಿದೆ. ಇಲ್ಲಿನ ಚೋಂಗ್‌ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಟಿಬೆಟ್‌ ಏರ್‌ಲೈನ್ಸ್‌ ವಿಮಾನ ಟೇಕಾಫ್‌ ಆಗುವ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ವಿಮಾನ ಹೊತ್ತಿ ಉರಿದಿದೆ. ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಆದ್ರೆ, ಸಿಬ್ಬಂದಿಯ ಮುಂಜಾಗ್ರತೆಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೇಫಾಗಿ ಕೆಳಗಿಳಿಸಲಾಗಿದೆ.

ವಿಮಾನದಲ್ಲಿ 113 ಪ್ರಯಾಣಿಕರರು, 9 ಸಿಬ್ಬಂದಿ ಸೇರಿ 122 ಮಂದಿ ಪ್ರಯಾಣಿಸುತ್ತಿದ್ದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಏರ್‌ಬಸ್‌ ಎ319 ಹೆಸರಿನ ಈ ವಿಮಾನ ಚೋಂಗ್‌ಕಿಂಗ್‌ನಿಂದ ಟಿಬೆಟ್‌ನ ರಾಜಧಾನಿ ಲ್ಹಾಸಾಗೆ ತೆರಳುತಿತ್ತು. ದುರ್ಘಟನೆಯ ವಿಡಿಯೊ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳೆದ ತಿಂಗಳಷ್ಟೇ ಚೀನಾದ ‘ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌’ ವಿಮಾನವೊಂದು ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೆ ಈಡಾಗಿ 132 ಜನ ಮೃತಪಟ್ಟಿದ್ದರು.

Share Post