CrimeInternational

ಭಾರತಕ್ಕೆ ನುಗ್ಗಲು ಯತ್ನ; ಬಿಎಸ್‌ಎಫ್‌ ಯೋದರ ಗುಂಡಿಗೆ ಪಾಕ್‌ ವ್ಯಕ್ತಿ ಬಲಿ

ಜಮ್ಮು; ಪಾಕಿಸ್ತಾನದ ವ್ಯಕ್ತಿಯೊಬ್ಬ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದು, ಆತನನ್ನು ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದೆ.

ಪಾಕಿಸ್ತಾನದ ವ್ಯಕ್ತಿ ಗಡಿಯ ತಡೆ ಬೇಲಿ ಬಳಿ ಬರುತ್ತಿದ್ದ. ಬೇಲಿ ದಾಟುವ ಉದ್ದೇಶ ಆತನದ್ದಾಗಿತ್ತು. ಹೀಗಾಗಿ ಬಿಎಸ್‌ಎಪ್‌ ಯೋಧರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೂ ಆತ ಬೇಲಿ ಬಳಿಗೆ ಮುನ್ನುಗ್ಗಿ ಬರುತ್ತಿದ್ದ. ಈ ಹಿನ್ನೆಲೆಯಲ್ಲಿ ಬಿಎಸ್‌ಎಫ್‌ ಯೋಧರು ಮೂರು ಸುತ್ತು ಗುಂಡು ಹಾರಿಸಿದೆ. ಪಾಕಿಸ್ತಾನದ ಕಡೆಯಿಂದ ವ್ಯಕ್ತಿಯೊಬ್ಬ ವೇಗವಾಗಿ ಗಡಿ ಬೇಲಿಯ ಕಡೆಗೆ ಬರುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ಆತನನ್ನು ಅಲ್ಲಿಯೇ ನಿಲ್ಲುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ಆತ ನಿಲ್ಲದೆ ಮುಂದೆ ಬಂದಿದ್ದಾನೆ ಎಂದು ಬಿಎಸ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನುಸುಳುತ್ತಿದ್ದ ವ್ಯಕ್ತಿಯ ಮೃತ ದೇಹವನ್ನು ಸೋಮವಾರ ಬೆಳಿಗ್ಗೆ ಪೊಲೀಸರಿಗೆ ಒಪ್ಪಿಸಲಾಗಿದೆ. ಆತನ ಬಳಿ ಯಾವುದೇ ವಸ್ತುಗಳು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

Share Post