ಬಾಂಗ್ಲಾದ ಇಸ್ಕಾನ್ ಟೆಂಪಲ್ ಮೇಲೆ ದಾಳಿ: ದೇವಸ್ಥಾನ ಲೂಟಿ ಮಾಡಿದ ದಾಂಡಿಗರು
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಕೆಲ ಲೂಟಿಕೋರರು ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ಪ್ರಸಿದ್ಧ ಇಸ್ಕಾನ್ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿರುವುದು ಸಂಚಲನ ಮೂಡಿಸಿದೆ. ದಾಳಿಯಲ್ಲಿ ಸುಮಾರು 200 ಮಂದಿ ಭಾಗಿಯಾಗಿದ್ದು, ದೇವಸ್ಥಾನವನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ. ದಾಳಿ ತಡೆಯಲು ಮುಂದಾದ ಕೆಲವರ ಮೇಲೆ ಹಿಂಸಾತ್ಮಕ ಕೃತ್ಯ ಎಸೆಗಿ ಗಾಯಗೊಳಿಸಿದ್ದಾರೆ. ಈ ಬಗ್ಗೆ ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಗಳು ಟ್ವೀಟ್ ಮಾಡಿದ್ದಾರೆ. ದಾಳಿಯ ವಿಡಿಯೋ ದೃಶ್ಯಾವಳಿಗಳನ್ನು ಕೂಡಾ ಪೋಸ್ಟ್ ಮಾಡಲಾಗಿದೆ.
ಇಸ್ಕಾನ್ ರಾಧಾಕಾಂತ ದೇವಾಲಯವು ಓಲ್ಡ್ ಢಾಕಾದ ವಾರಿಯಲ್ಲಿ 222 ಲಾಲ್ ಮೋಹನ್ ಸಹಾ ಸ್ಟ್ರೀಟ್ನಲ್ಲಿದೆ. ಮಾರ್ಚ್ 17, 2022 ರ ರಾತ್ರಿ, 200 ಪುಂಡರು ದೇವಾಲಯದ ಮೇಲೆ ದಾಳಿ ಮಾಡಿದರು. ದಾಳಿಯಲ್ಲಿ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಸಿದ್ರು ಎಂದು ಬಾಂಗ್ಲಾದೇಶಿ ಹಿಂದೂಗಳ ವಾಯ್ಸ್ ಆರೋಪಿಸಿದೆ. ದೇವಸ್ಥಾನದಲ್ಲಿದ್ದ ವಿಗ್ರಹದ ಮೇಲೆ ದಾಳಿ ನಡೆಸಿ ನಗದನ್ನು ದೋಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಲೂಟಿಕೋರರನ್ನು ತಡೆಯಲು ಯತ್ನಿಸಿದವರ ಮೇಲೆ ನಡೆದ ದಾಳಿ ನಡೆಸಿ ಮೂವರನ್ನು ಗಾಯಗೊಳಿಸಿದ್ದಾರೆ ಎಂದು HAF ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
On the night of shab-e-barat, Extremists are again attacking the Wari Radhakanta #ISKCON temple in Dhaka. We are requesting to all the Hindus to play their role in protecting the temple. #SaveBangladeshiHindus#SaveHinduTemplesInBangladesh @RadharamnDas @iskcon @india_iskcon pic.twitter.com/DVLZF7yVPG
— Voice Of Bangladeshi Hindus ?? (@VoiceOfHindu71) March 17, 2022