International

ಯುವಕನಿಂದ ಶಾಲೆಯಲ್ಲಿ ಗುಂಡಿನ ದಾಳಿ; 21 ಮಂದಿ ದಾರುಣ ಹತ್ಯೆ

ಟೆಕ್ಸಾಸ್‌; ಇಲ್ಲಿನ ಪ್ರಾಥಮಿಕ ಶಾಲೆಯೊಂದರಲ್ಲಿ  18ರ ಯುವಕನೊಬ್ಬ ಭೀಕರ ಗುಂಡಿನ ದಾಳಿ ನಡೆಸಿದ್ದಾರೆ. ಇದ್ರಲ್ಲಿ 18 ಮಕ್ಕಳು ಮತ್ತು ಓರ್ವ ಶಿಕ್ಷಕ ಸೇರಿ 21 ಮಂದಿ ದಾರುಣವಾಗಿ ಕೊಲೆಗೀಡಾಗಿದ್ದಾರೆ.  ಟೆಕ್ಸಾಸ್ ಗವರ್ನರ್ ಗ್ರೆಗ್‌ ಅಬಾಟ್ ಈ ಘಟನೆಯ ಕುರಿತು ಖಚಿತಪಡಿಸಿದ್ದಾರೆ. ಗುಂಡಿನ ದಾಳಿ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

   ಟೆಕ್ಸಾಸ್‌ ಗವರ್ನರ್‌ಗೆ   ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶಾಂತಿ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ನೆರತವೂ ನೀಡುವುದಾಗಿ ಬೈಡೆನ್‌ ಹೇಳಿದ್ದಾರೆಂದು ತಿಳಿದುಬಂದಿದೆ.

 

2012ರಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿನ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿ ಬಳಿಕ ನಡೆದ ಅತಿ ದೊಡ್ಡ ದುರಂತ ಇದಾಗಿದೆ. ಇತ್ತೀಚೆಗೆ, ನ್ಯೂಯಾರ್ಕ್​ನ ಬಫಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯೊಬ್ಬ ಭಾರಿ ಗುಂಡಿನ ದಾಳಿ ನಡೆಸಿದ್ದ. ಇದರ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಇದಾದ ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದೆ. ಆ ಘಟನೆಯನ್ನು ‘ಜನಾಂಗೀಯ ಪ್ರೇರಿತ’ ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿತ್ತು.

Share Post