ರಕ್ಕಸ ಚಂಡಮಾರುತ ʼರೈʼ ಗೆ 208 ಬಲಿ
ಮನಿಲಾ : ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಸೂಪರ್ ಟೈಫೂನ್ ರೈಗೆ ತುತ್ತಾಗಿ ೨೦೮ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಅಪ್ಪಳಿಸಿದ ಚಂಡಮಾರುತಕ್ಕೆ ದೇಶದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಭಾರಿ ಹಾನಿ ಉಂಟಾಗಿದೆ.
239 ಜನರು ಗಾಯಗೊಂಡಿದ್ದು ಹಾಗೆಯೇ 52 ಮಂದಿ ನಾಪತ್ತೆಯಾಗಿದ್ದಾರೆ ಎಂದು ಫಿಲಿಪೈನ್ಸ್ ಸರ್ಕಾರ ಅಂದಾಜಿಸಿದೆ.
ಗಂಟೆಗೆ 195ಕಿಮಿ/ಗಂಟೆ ವೇಗದಲ್ಲಿ ಅಪ್ಪಳಿಸಿದ್ದು, ಮುಂಜಾಗೃತ ಕ್ರಮವಾಗಿ ೩ ಲಕ್ಷಕ್ಕೂ ಹೆಚ್ಚು ಜನರನ್ನು ಕರಾವಳಿ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.