International

ಸೂಪರ್‌ ಟೈಫೂನ್‌ಗೆ 75ಮಂದಿ ಬಲಿ: ಸಂಕಷ್ಟದಲ್ಲಿ ಜನ

ಮನಿಲಾ: ಸೂಪರ್‌ ಟೈಫೂನ್‌ ಎಂಬ ಪ್ರಬಲ ಚಂಡಮಾರುತಕ್ಕೆ ಸಿಲುಕಿ ೭೫ ಮಂದಿ ಮೃತಪಟ್ಟಿರುವ ಘಟನೆ ಫಿಲಿಪ್ಪೀನ್ಸ್‌ನಲ್ಲಿ ನಡೆದಿದೆ. ಡಿಸೆಂಬರ್‌ ಮಧ್ಯಭಾಗದಲ್ಲಿ ಅಂದ್ರೆ 15ರಿಂದ 17ರ ವರೆಗೆ ಟೈಫೂನ್ ‘ರೈ’ ಫಿಲಿಪ್ಪೀನ್ಸ್‌ನ ದಕ್ಷಿಣ ಮತ್ತು ಮಧ್ಯ ದ್ವೀಪಸಮೂಹಗಳ ಮೇಲೆ ಅಟ್ಟಹಾಸ ಮೆರೆದಿದೆ. ಇದರ ಅಟ್ಟಹಾಸಕ್ಕೆ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಅನ್ನ ಆಹಾರವಿಲ್ಲದೆ ನರಳಾಡುವ ಪರಿಸ್ಥಿತಿ ಬಂದೊದಗಿದೆ. ಈಗಾಗಲೇ ಚಂಡಮಾರುತಕ್ಕೆ ಸಿಲುಕಿರುವ ದ್ವೀಪಗಳಿಗೆ ನೀರು ಮತ್ತು ಆಹಾರ ತಲುಪಿಸುವ ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡಿ. ಸುಮಾರು ಮೂರು ಲಕ್ಷ ಮಂದಿ ತಮ್ಮ ಮನೆಗಳನ್ನು ತೊರೆದು ಬೇರೆಡೆಗೆ ತೆರಳಿದ್ದಾರೆ. ಈ ಚಂಡಮಾರುತದಿಂದ ಅನೇಕ ಕಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ, ಮನೆಯ ಮೇಲ್ಛಾವಣಿ ಹಾರಿಹೋಗಿವೆ. ಅಂತಹ ಪ್ರದೇಶಗಳಲ್ಲಿ ಸಂವಹನಕ್ಕೆ ತೀವ್ರ ಸಮಸ್ಯೆಯುಂಟಾಗಿದೆ. ಸುಮಾರು 49 ಮಂದಿ ಈ ವರ್ಷದ ಚಂಡಮಾರುತಗಳಿಗೆ ಬಲಿಯಾಗಿದ್ದಾರೆ,’ ಎಂದು ಬೋಹೋಲ್‌ನ ಗವರ್ನರ್ ಆರ್ಥರ್ ಯಾಪ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಕಾಣೆಯಾದ 10 ಮಂದಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈ ಚಂಡಮಾರುತ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದಾಗ ಅದರ ವೇಗ ಗಂಟೆಗೆ 240 ಕಿ.ಮೀ ಇತ್ತು. ಫಿಲಿಫೀನ್ಸ್ ಅನ್ನು ದಾಟಿದಾಗ ಚಂಡಮಾರುತದ ವೇಗ 185 ಕಿ.ಮೀಗಳಿಗೆ ಇಳಿದಿತ್ತು. ಈಗ ವಿಯೆಟ್ನಾಂ ಮೇಲೆ ಅಟ್ಟಹಾಸ ಮೆರೆಯುತ್ತಿರುವ ಅದೇ ರೈ ಚಂಡಮಾರುತದ ವೇಗ 270ಕಿ.ಮೀ.ಗೆ ಏರಿದೆ. ವಾಯುವ್ಯ ಪೆಸಿಫಿಕ್ ಸಾಗರದಲ್ಲಿ ರೂಪುಗೊಳ್ಳುವ ಚಂಡಮಾರುತಗಳನ್ನು ಟೈಫೂನ್‌ ಎಂದು, ದಕ್ಷಿಣ ಪೆಸಿಫಿಕ್‌ ಸಾಗರ ಮತ್ತು ಹಿಂದೂ ಮಹಾ ಸಾಗರದಲ್ಲಿ ರೂಪುಗೊಳ್ಳುವ ಚಂಡಮಾರುತಗಳನ್ನು ಸೈಕ್ಲೋನ್‌ ಎಂದು, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಈಶಾನ್ಯ ಪೆಸಿಫಿಕ್ ಸಾಗರಗಳಲ್ಲಿನ ಚಂಡಮಾರುತಗಳನ್ನು ಹರ್ರಿಕೇನ್‌ಗಳೆಂದು ತಜ್ಞರು ಹೆಸರಿಟ್ಟಿದ್ದಾರೆ.

Share Post