ಉತ್ತರ ಕೊರಿಯಾದಲ್ಲಿ 11 ದಿನ ನಗೋದು ಬ್ಯಾನ್ ಮಾಡಿದ ಸರ್ಕಾರ
ಸಿಯೋಲ್ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈ ರೀತಿಯ ಒಂದು ಸುಗ್ರೀವಾಜ್ಞೇ ಹೊರಡಿಸಿದ್ದಾರೆ. ಮಾಜಿ ನಾಯಕ ಕಿಮ್ ಜಾಮಗ್ ಇಲ್ ಅವರ ೧೦ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶೋಕಾಚರಣೆ ನಡೆಸುವಂತೆ ಆದೇಶ ಮಾಡಿದ್ದಾರೆ.
ಪ್ರಜೆಗಳು ಮದ್ಯಪಾನ ಮಾಡಬಾರದು, ಶಾಪಿಂಗ್ ಮಾಡಬಾರದು ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದೆಂದು ಸರ್ಕಾರ ಆದೇಶ ಹೊರಡಿಸಿದೆ, ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಸೂಚಿಸಿದೆ.