DistrictsPolitics

ಫೆ27ಕ್ಕೆ ಶಿವಮೊಗ್ಗಕ್ಕೆ ಮೋದಿ; ಭರದಿಂದ ಸಾಗಿದ ರಸ್ತೆ ಕಾಮಗಾರಿ

ಶಿವಮೊಗ್ಗ; ಫೆಬ್ರವರಿ 27ರಂದು ಮೋದಿಯವರು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗುತ್ತಿದೆ. ಶಿವಮೊಗ್ಗ–ಕಾಚಿನಕಟ್ಟೆ ಮಾರ್ಗವಾಗಿ ಸೋಗಾನೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಭರದಿಂದ ಸಾಗಿದೆ.

ಶಿವಮೊಗ್ಗದೆಲ್ಲೆಡೆ ರಸ್ತೆ ಸ್ವಚ್ಛತಾಕಾರ್ಯ ನಡೆಯುತ್ತಿದೆ. ರಸ್ತೆಗಳಲ್ಲಿದ್ದ ನೂರಾರು ಗುಂಡಿಗಳನ್ನು ಮುಚ್ಚಲಾಗಿದ್ದು, ಈಗ ಈ ರಸ್ತೆ ವಿಮಾನ ನಿಲ್ದಾಣದ ‘ರನ್ ವೇ’ನಂತೆ ಕಂಗೊಳಿಸುತ್ತಿದೆ.

Share Post