Crime

ಅಭಿಮಾನಿ ಮೇಲೆ ಹಲ್ಲೆ – ಧನ್ವೀರ್‌ ಮೇಲೆ ಎಫ್‌ ಐ ಆರ್‌ ದಾಖಲು

ಬೆಂಗಳೂರು : ನಟ ಧನ್ವೀರ್‌ ಅಭಿನಯದ ಸಿನಿಮಾ ಬೈ ಟು ಲವ್‌ ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ನಟ ಧನ್‌ವೀರ್ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದಾರೆ‌ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.

ಸೆಲ್ಫಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್‌ ಹಾಗೂ ಅವರ ಸ್ನೇಹಿತರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಗುರುವಾರ ರಾತ್ರಿ ಅನುಪಮಾ ಥಿಯೇಟರ್‌ ಬಳಿ ಚಂದ್ರಶೇಖರ್‌ ಮತ್ತು ಅವನ ಸ್ನೇಹಿತ ಹೋಗುವಾಗ ಧನ್ವೀರ್‌ ಅವರನ್ನು ನೋಡಿದ್ದಾನೆ. ಸೆಲ್ಫಿ ತೆಗೆದುಕೊಳ್ಳಲು ಹೋದಾಗ  ಧನ್ವೀರ್‌ ಸ್ನೇಹಿತ ನಾಳೆ ಸೆಲ್ಫೀ ತೆಗೆದುಕೊಂಡರೆ ಆಯ್ತು ಬಾ ಟೈಮ್‌ ಆಗ್ತಿದೆ ಎಂದು ಕರೆದಿದ್ದಾನೆ. ಇದಕ್ಕೆ ಕುಪಿತಗೊಂಡ ಧನ್ವೀರ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್‌ ಅವರು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೆ ನಟ ಧನ್ವೀರ್‌ ಇನ್ನು ಏನನ್ನೂ ಪ್ರತಿಕ್ರಿಯಿಸಿಲ್ಲ.

Share Post