International

ಸ್ಟೀವ್‌ ಜಾಬ್ಸ್‌ ಧರಿಸುತ್ತಿದ್ದ ಹಳೆ ಚಪ್ಪಲಿ 1.77 ಕೋಟಿ ರೂ.ಗೆ ಹರಾಜು

ವಾಷಿಂಗ್ಟನ್; ಆಪಲ್  ಸಂಸ್ಥೆ  ಸ್ಟೀವ್ ಜಾಬ್ಸ್ ಅವರು ಎಪ್ಪತ್ತರ ದಶಕದಲ್ಲಿ ಧರಿಸುತ್ತಿದ್ದ  ಚರ್ಮದ ಚಪ್ಪಲಿ 1.77 ಕೋಟಿ ರೂಪಾಯಿ ಹರಾಜಾಗಿದೆ.  ನವೆಂಬರ್ 11 ರಿಂದ ಪ್ರಾರಂಭವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಗಿದ್ದು, ಅಂತಿಮವಾಗಿ ಚಪ್ಪಲಿ 1.77 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು ಸ್ಟೀವ್ ಜಾಬ್ಸ್ 70-80ರ ದಶಕದಲ್ಲಿ ಧರಿಸುತ್ತಿದ್ದರು. ಸ್ಟೀವ್‌ ಜಾಬ್ಸ್‌ ಅನೇಕ ಪ್ರಮುಖ ಕ್ಷಣಗಳಲ್ಲಿ ಇವೇ ಚಪ್ಪಲಿಯನ್ನು ಧರಿಸುತ್ತಿದ್ದರು ಎಂದು ಹೇಳಲಾಗಿದೆ.

1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಮೊದಲಬಾರಿಗೆ ಆನ್ ಮಾಡುವಾಗಲೂ ಸ್ಟೀವ್ ಜಾಬ್ಸ್ ಇದೇ ಚಪ್ಪಲಿ ಧರಿಸಿದ್ದರಂತೆ. ಈ ಚಪ್ಪಲಿಯನ್ನು ಹಲವು ದೇಶಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲಿ ಸ್ಟೀವ್‌ ಜಾಬ್ಸ್‌ನ ಈ ಚಪ್ಪಲಿಯನ್ನು ಇಡಲಾಗಿತ್ತು.

Share Post