International

20 ನಿಮಿಷದಲ್ಲಿ ಒಮಿಕ್ರಾನ್‌ ಪತ್ತೆ ಮಾಡುವ ತಂತ್ರಜ್ಞಾನ

ಸಿಯೋಲ್: ಅತಿ ಕಡಿಮೆ ಅವಧಿಯಲ್ಲಿ ಒಮಿಕ್ರಾನ್‌ ಸೋಂಕು ಪತ್ತೆ ಮಾಡುವ ತಂತ್ರಜ್ಞಾನವನ್ನು ಕೊರಿಯಾ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಅದನ್ನು ಮಾಲಿಕ್ಯುಲರ್‌ ಡಯಾಗ್ನೋಸ್ಟಿಕ್‌ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ.

  ಕೇವಲ 20 ನಿಮಿಷದಲ್ಲಿ ಒಮಿಕ್ರಾನ್‌ ಸೋಂಕು ತಗುಲಿದೆಯೋ ಇಲ್ಲವೋ ಎಂಬುದು ಈ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಬಹುದು. ಇದರ ಸಂಶೋಧನೆ ಈಗಾಗಲೇ ಪೂರ್ತಿಯಾಗಿದೆ.  ಆದರೂ ಇದು ಎಲ್ಲಾ ಕಡೆ ತಲುಪಲು ಸಾಕಷ್ಟು ಸಮಯ ಬೇಕಾಗಬಹುದು. ಇಲ್ಲಿನ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಲಿ ಜಂಗ್-ವೂಕ್ ನೇತೃತ್ವದ ಸಂಶೋಧನಾ ತಂಡ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದೆ.

ಇದು ಹೇಗೆ ಕೆಲಸ ಮಾಡುತ್ತದೆ..?

   ಇದು ಆಣ್ವಿಕ ರೋಗ ನಿರ್ಣಯ ತಂತ್ರಜ್ಞಾನವಾಗಿದೆ. ಪ್ರಸ್ತುತ ಈ ತಂತ್ರಜ್ಞಾನ ಕಡಿಮೆ ಸಂಖ್ಯೆಯ ವೈರಸ್‌ಗಳನ್ನು ಮಾತ್ರ ಪತ್ತೆ ಮಾಡುತ್ತದಂತೆ. ಆದರೆ ನ್ಯೂಕ್ಲಿಯಿಕ್ ಆಸಿಡ್-ಬೈಂಡಿಂಗ್ ಪ್ರತಿಕ್ರಿಯೆಯ ಕಾರಣವನ್ನು ನಿರ್ಧರಿಸಲು ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.

Share Post