ನವೆಂಬರ್ 18ರಿಂದ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭ
ಬೆಂಗಳೂರು; ಕಳೆದ ಬಾರಿ ಮಳೆಯಿಂದಾಗಿ ನಿಲ್ಲಿಸಲಾಗಿದ್ದ ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಮತ್ತೆ ಶುರು ಮಾಡಲಾಗುತ್ತಿದೆ. ನವೆಂಬರ್ 8 ರಂದು ಮುಳಬಾಗಿಲಿನಿಂದಲೇ ಪಂಚರತ್ನ ಯಾತ್ರೆ ಶುರುವಾಗಲಿದೆ. ಈ ಬಗ್ಗೆ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು ಮಾಹಿತಿ ನೀಡಿದ್ದಾರೆ.
ನವೆಂಬರ್ 18 ಶುಕ್ರವಾರದಂದು ಮುಳಬಾಗಿಲಿನಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ದೊರೆಯಲಿದೆ. ಅನಂತರ ನವೆಂಬರ್ 19ರಂದು ಬಂಗಾರಪೇಟೆಯಲ್ಲಿ ಪಂಚರತ್ನ ಯಾತ್ರೆ ಸಂಚರಿಸಲಿದೆ. ನವೆಂಬರ್ 20ರಂದು ಮಾಲೂರು, ನವೆಂಬರ್ 21 ರಂದು ಕೋಲಾರ ಹಾಗೂ ನವೆಂಬರ್ 22 ರಂದು ಶ್ರೀನಿವಾಸಪುರದಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ.
2023ರ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗಾಗಿ ಈ ಯಾತ್ರೆ ಹಮ್ಮಿಕೊಂಡಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದ್ದು, ರಾಜ್ಯಾದ್ಯಂತ ಕುಮಾರಸ್ವಾಮಿ ಪ್ರವಾಸ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಲಿದ್ದಾರೆ.