ಕಿಮ್ ಸ್ಯಾಡಿಸಂ-ಮೈನಸ್ 15ಡಿಗ್ರಿ ಚಳಿಯಲ್ಲಿ ಪ್ರಜೆಗಳು, ಅಧಿಕಾರಿಗಳನ್ನು ನಿಲ್ಲಿಸಿದ ಕಿಮ್
ನಾರ್ತ್ ಕೊರಿಯಾ: ಉತ್ತರ ಕೊರಿಯಾ ನರಕಾಸುರ.. ಅಧ್ಯಕ್ಷ ಕಿಮ್ ಹೇಳಿದಂತೆ ಮಾಡದಿದ್ದರೆ ಜೈಲಿಗೆ.. ಇಲ್ಲದಿದ್ದರೆ ಮೇಲಕ್ಕೆ ಕಳುಹಿಸುವಷ್ಟು ಕೋಪಿಷ್ಟ. ಕಿಮ್ ಕೋಪಗೊಂಡರೆ ಅಷ್ಟೆ ಏನು ಬೇಕಾದ್ರೂ ಮಡ್ತಾನೆ. ತನಗಾಗಿ ಸಾಯಲು ಕೂಡ ಸಿದ್ಧರಾಗಿರಬೇಕು ಎಂದು ತನ್ನ ಪ್ರಜೆಗಳಿಗೆ ಸಂದೇಶ ಕೂಡ ಜನರಿಗೆ ಕೊಟ್ಟಿದ್ದಾನೆ. ಕಿಮ್ ಜಾಂಗ್ ಉನ್ ಅವರ ಸ್ಯಾಡಿಸಂ ಅತಿರೇಕದಲ್ಲಿದೆ. ಯಾರು ಸತ್ತರೂ ಬದುಕಿದರೂ ಕೇಳಲ್ಲ..ಅವನು ಹೇಳಿದಂತೆ ಅಗಬೇಕಷ್ಟೇ..
ಇತ್ತೀಚೆಗೆ ಕಿಮ್ ಅವರ ತಂದೆ ಕಿಮ್ ಜಾಂಗ್ ಇಲ್ ಅವರ 80 ನೇ ಹುಟ್ಟುಹಬ್ಬದ ಆಚರಣೆ ಮಾಡಲು ಸಂಜಿಯಾನ್ ನಗರದ ಹೊರಗೆ ಸಿದ್ಧತೆ ನಡೆಸಿದ್ದಾನೆ. ಮೈನಸ್ 15ಡಿಗ್ರಿ ಕೊರೆಯುವ ಚಳಿಯಲ್ಲಿ ದೇಶದ ಜನರು ಮತ್ತು ಅಧಿಕಾರಿಗಳನ್ನು ಅರ್ಧ ಗಂಟೆ ಕಾಲ ಮೂಳೆ ಕೂಡ ಮುರಿದು ಹೋಗುವಂತಹ ಚಳಿಯಲ್ಲಿ ನಿಲ್ಲಿಸಿದ್ದಾನೆ.
ಕಿಮ್ ಆಹ್ವಾನ ನೀಡಿದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸುಮಾರು ಅರ್ಧ ಗಂಟೆ ಕಿಮ್ ಭಾಷಣವನ್ನು ಅತ್ತಿತ್ತ ಕದಲದೆ ಜನರು ಆಲಿಸಿದರು. ಸ್ವಲ್ಪ ತಿರುಗಿದರೂ ಕಾಲು ಕದಲಿಸಿದರೂ ಎಲ್ಲಿ ಸುಟ್ಟು ಬಿಡುತ್ತಾನೆಂಬ ಭಯದಲ್ಲಿ ಜನ ಉಸಿರು ಬಿಗಿ ಹಿಡಿದು ನಿಂತಿದ್ದರು.
ಕಿಮ್‌ನೊಂದಿಗೆ ವೇದಿಕೆಯಲ್ಲಿರುವ ಕೆಲವು ಅಧಿಕಾರಿಗಳು ತಮ್ಮ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಹೀಟರ್‌ಗಳನ್ನು ಬಳಸಿದ್ರು. ವೇದಿಕೆಯ ಮೇಲಿನ ರೆಡ್ ಕಾರ್ಪೆಟ್ ಅಡಿಯಲ್ಲಿ ವಿದ್ಯುತ್ ತಂತಿಗಳು ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ ಜೊತೆಗೆ ಸ್ಯಾಡಿಸ್ಟ್ ಕಿಮ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.