International

RUSSIA-UKRAINE WAR: ಪೋಲ್ಯಾಂಡ್‌ ಗಡಿಯಲ್ಲಿ ಭಾರತೀಯರ ಮೇಲೆ ಹಲ್ಲೆ..!

ಕೀವ್‌; ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಸೇರಿ ಹಲವು ದೇಶದ ಜನರು ಗಡಿಗಳತ್ತ ಬರುತ್ತಿದ್ದಾರೆ. ಈ ವೇಳೆ ರಷ್ಯಾ ಸೈನಿಕರು ಭಾರತೀಯರು ಸೇರಿ ಹಲವು ದೇಶದ ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕಾರ್ಕೀವ್​ನಿಂದ ತಾಯ್ನಾಡಿಗೆ ತೆರಳಲು ಹೋಗಿರುವ ವಿವಿಧ ದೇಶಗಳ ನಾಗರಿಕರ ಮೇಲೆ ಹಲ್ಲೆ ಮಾಡಿದ್ದಾರೆ.

ಭಾರತ, ಇಸ್ರೇಲ್, ಟರ್ಕಿ ಸೇರಿ ಹಲವು ದೇಶಗಳ ಜನರು ಲಗ್ಗೇಜ್‌ನೊಂದಿಗೆ ಪೋಲ್ಯಾಂಡ್‌ ಗಡಿಗೆ ಬಂದಿದ್ದರು. ಅಲ್ಲಿಂದ ತಮ್ಮ ದೇಶಗಳಿಗೆ ಪ್ರಯಾಣ ಬೆಳೆಸುವುದು ಅವರ ಉದ್ದೇಶ. ಆದ್ರೆ ಪೋಲ್ಯಾಂಡ್ ಗಡಿ ಪ್ರವೇಶ ಮಾಡಲು ಪೋಲ್ಯಾಂಡ್ ಸೈನಿಕರು ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಗಡಿಯಲ್ಲಿ ರಷ್ಯಾ ಸೈನಿಕರು ವಿದೇಶಿಯರ ಮೇಲೂ ಹಲ್ಲೆ ನಡೆಸಿದ್ದಾರೆ.

ಇನ್ನು ಉಕ್ರೇನ್​ ಹಾಗೂ ಸ್ಲೋವಾಕಿಯಾದ ಬಾರ್ಡರ್​ನಲ್ಲೂ ಇದೇ ಪರಿಸ್ಥಿತಿ ಇದೆ. ಉಕ್ರೇನ್ ನಲ್ಲಿರೋ ಭಾರತೀಯಾ ರಾಯಭಾರಿ ಕಚೇರಿ ಸೂಚನೆ ಮೇರೆಗೆ ಭಾರತೀಯ ವಿದ್ಯಾರ್ಥಿಗಳು ಅಲ್ಲಿಗೆ ಗಡಿಗೆ ತೆರಳಿದ್ದರು. ಆದ್ರೆ ಸ್ಲೊವಾಕಿಯಾ ಸೈನಿಕರು ಭಾರತೀಯ ವಿದ್ಯಾರ್ಥಿಗಳನ್ನು ಒಳಬಿಡುತ್ತಿಲ್ಲ. ಹೀಗಾಗಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ.

Share Post