International

ಯುದ್ಧ ಬಿಕ್ಕಟ್ಟಿನ ಮಾತುಕತೆಗೆ ಜೆಲೆನ್ಸ್ಕಿ ಪ್ರಸ್ತಾವನೆ: ನಿಯೋಗ ಕಳುಹಿಸಲು ಪುಟಿನ್ ಸಿದ್ಧ..!

ರಷ್ಯಾ: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ ಮೇಲೆ ಉಂಟಾಗುವ ಪರಿಣಾಮಗಳನ್ನು ಗಮನಿಸಿ  ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆಯ ಪ್ರಸ್ತಾವವನ್ನು ಒಪ್ಪಕೊಂಟಿದ್ದಾರೆ.  ರಷ್ಯಾ ನೀಡಿದ ಮಾತುಕತೆಯ  ಪ್ರಸ್ತಾಪವನ್ನು ಝೆಲೆನ್ಸ್ಕಿ  ಸ್ವಾಗತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೇರವಾಗಿ ಮಾತುಕತೆ ನಡೆಸುವಂತೆ ಪುಟಿನ್‌ ಬಳಿ ಮನವಿ ಮಾಡಿದ್ದಾರೆ.  ಉಕ್ರೇನ್ ಪ್ರಸ್ತಾವನೆಗೆ ಪುಟಿನ್ ಕೂಡಾ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.  ಮಾತುಕತೆಗಾಗಿ ಉಕ್ರೇನ್‌ಗೆ ತಮ್ಮ ನಿಯೋಗ ಕಳುಹಿಸಲು ಸಿದ್ಧವಿದ್ದಾರಂತೆ ಪುಟಿನ್.‌

ಉಕ್ರೇನ್‌ನಲ್ಲಿ ಉಂಟಾಗುತಿರುವ ಸಾವು-ನೋವುಗಳಿಂದ ಆತಂಕ ವ್ಯಕ್ತಪಡಿಸಿದ ಜೆಲೆನ್ಸ್ಕಿ. ರಷ್ಯಾ ನೀಡಿದ ಆಫರ್‌ಗೆ ಒಪ್ಪಿಕೊಂಡಿದೆ. ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಿದ್ರೆ ಯುದ್ಧ ನಿಲ್ಲಿಸುವುದಾಗಿ ರಷ್ಯಾ ಹೇಳಿತ್ತು. ಅದರಂತೆ ನನಗೆ ಜನರ ಪ್ರಾಣ ಮುಖ್ಯ ಯಾವುದೇ ಮಾತುಕತೆಗೆ ನಾನು ಸಿದ್ಧನಿದ್ದೇನೆ ಎಂದು ಉಕ್ರೇನ್‌ ಅಧ್ಯಕ್ಷ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ತಮ್ಮ ನಿಯೋಗವನ್ನು ಕಳುಹಿಸಲು ಪುಟಿನ್‌ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

Share Post