ತೀವ್ರಗೊಂಡ ರಷ್ಯಾ ಸೈನಿಕರ ದಾಳಿ; ಬಸ್ ಮೇಲೆ ಶೆಲ್ ಪ್ರಯೋಗ ಮಾಡಿದ ರಷ್ಯಾ
ಕೀವ್; ಉಕ್ರೇನ್‌ನಲ್ಲಿ ರಷ್ಯಾ ಸೈನಿಕರ ದಾಳಿ ಮುಂದುವರೆದಿದೆ. ಒಂದು ಕಡೆ ರಷ್ಯಾ ಕೀವ್‌ನಗರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿದೆ. ಇಂದು ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್ ಬಸ್ ಮೇಲೆ ದಾಳಿ ನಡೆಸಲಾಗಿದೆ. ರಷ್ಯಾ ಸೈನಿಕರು ಬಸ್ ಮೇಲೆ ಶೆಲ್ ದಾಳಿ ನಡೆಸಿದ್ದಾರೆ.
ಸುಮಿ ನಗರದಿಂದ ಉಕ್ರೇನ್ ನಾಗರಿಕರನ್ನು ಬೇರೆಡೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ರಷ್ಯಾ ಸೈನಿಕರು ಬಸ್ ಮೇಲೆ ಶೆಲ್ ದಾಳಿ ಮಾಡಿದ್ದಾರೆ. ಇದ್ರಿಂದಾಗಿ ಬಸ್‌ಗೆ ಹಾನಿಯಾಗಿದೆ. ಜೊತೆಗೆ ಮೂವರು ಉಕ್ರೇನ್ ಪ್ರಜೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.