InternationalPolitics

ಮಾಲ್ಡೀವ್ಸ್‌ ಪಾರ್ಲಿಮೆಂಟ್‌ನಲ್ಲಿ ಸಂಸದರ ಡಿಶುಂ ಡಿಶುಂ!

ಮಾಲ್ಡೀವ್ಸ್‌ ಪಾರ್ಲಿಮೆಂಟ್‌ನಲ್ಲಿ ಆಡಳಿತ ಪಕ್ಷದ ಒಕ್ಕೂಟದ ಸಂಸದರು ಹಾಗೂ ಪ್ರತಿಪಕ್ಷದ ಸಂಸದರ ನಡುವೆ ಕಿತ್ತಾಟ ನಡೆದಿದೆ. ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾಲೆ ಸಂಸತ್ತಿಗೆ ಸಂಬಂಧಿಸಿದ ಒಂದು ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಆ ವಿಡಿಯೋದಲ್ಲಿ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಾರ್ಟಿ ಸಂಸದ ಇಸಾ ಹಾಗೂ ಪೀಪಲ್ಸ್‌ ನ್ಯಾಷನಲ್‌ ಕಾಂಗ್ರೆಸ್‌ ಸಂಶದ ಅಬ್ದುಲ್ಲಾ ಷಹೀಮ್‌ ಅಬ್ದುಲ್‌ ಹಕೀಮ್‌ ಇದ್ದಾರೆ. ಇಸಾ ಅವರು ಕಾಲು ಹಿಡಿದುಕೊಂಡು ಷಹೀಮ್‌ ಎಳೆದಿದ್ದಾರೆ. ಇದರಿಂದಾಗಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಇಸಾ ಕುತ್ತಿಗೆ ಮೇಲೆ ಷಹೀಮ್‌ ಕಾಲಿಟ್ಟು ತುಳಿಯುತ್ತಾ, ಜುಟ್ಟು ಎಳೆಯುತ್ತಿರುವ ದೃಶ್ಯಗಳಿವೆ. ಜೊತೆಗೆ ಇತರೆ ಸಂಸದರು ಷಹೀಮ್‌ ಅವರನ್ನು ಆಚೆ ಕಳುಹಿಸಿದ್ದಾರೆ.

 

Share Post