Bengaluru

ಪೋಲಿಯೋ ವಿರುದ್ಧದ ನಮ್ಮ ಸಮರ ಅತ್ಯಂತ ಯಶಸ್ವಿಯಾಗಿದೆ:ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದಲ್ಲಿ ಟಿಬಿ, ಕಾಲಾರಾ, ಮಲೇರಿಯಾ ಹಾಗೂ ಪ್ಲೇಗ್ ರೋಗಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅವುಗಳ ಮೇಲೆ ಸಂಪೂರ್ಣ ಹಿಡಿತಸಾಡಿಸಿದ್ದೇವೆ. ಅದೇ ರೀತಿ ಪೋಲಿಯೋ ವಿರುದ್ಧದ ನಮ್ಮ ಸಮರ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೋಲಿಯೋ ಮುಕ್ತ ರಾಷ್ಟ್ರವಾದರೂ ಪ್ರತಿ ವರ್ಷ ಮೂರು ದಿನ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ.ಲಸಿಕಾ ಕಾರ್ಯಕ್ರಮ ಬಹಳ ಮುಖ್ಯ. 25 ವರ್ಷಗಳ ಹಿಂದೆ ಪೋಲಿಯೋ ದುಷ್ಪರಿಣಾಮಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಅಂಗವಿಲಕತೆಗೆ ಮುಖ್ಯ ಕಾರಣ ಹಾಗೂ ದೊಡ್ಡ ಪ್ರಮಾಣದ ಜೀವ ಹಾನಿಗೆ ಪೋಲಿಯೋ ಕಾರಣವಾಗಿತ್ತು. ಮಕ್ಕಳಿಗೆ ಬರುವ ಈ ಕಾಯಿಲೆ ದೇಹವನ್ನು ನಿಷ್ಕ್ರಿಯ ಮಾಡಿ ಕ್ಷೋಭೆಯನ್ನುಂಟು ಮಾಡಿತ್ತು. ಆ ಸಂದರ್ಭದಲ್ಲಿ ಕೋವಿಡ್ ಗೆ ನಡೆದ ಹೋರಾಟದಂತೆಯೇ ಹೋರಾಟ ನಡೆದು ಓರಲ್ ಲಸಿಕೆ ಬಂದ ನಂತರ ನಿಯಂತ್ರಣಕ್ಕೆ ತರಲಾಯಿತು. ಪ್ರಗತಿ ಪರ ರಾಷ್ಟ್ರಗಳ ನಡುವೆ ಭಾರತದಲ್ಲಿ ತಳಮಟ್ಟದಿಂದ ಆಗುವ ಅಭಿಯಾನದ ಅನುಷ್ಠಾನ ಬೇರೆ ದೇಶಗಳಲ್ಲಿ ಕಾಣುವುದಿಲ್ಲ. ಬಡತನ, ಅಪೌಷ್ಟಿಕತೆ ಇರುವಲ್ಲಿ ಈ ರೀತಿಯ ರೋಗಗಳಿಗೆ ಹೆಚ್ವಿನ ಅವಕಾಶವಿರುವುದರಿಂದ ಜನರು ಕೂಡ ಜಾಗೃತರಾಗಿದ್ದರೆ ಎಂದರು.

Share Post