ಶಿವರಾಜ್‌ಕುಮಾರ್ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ
ದುಬೈ; ಇತ್ತೀಚೆಗೆ ದುಬೈನಲ್ಲಿ ಸೈಮಾ ಸಿನಿಮಾ ಅವಾರ್ಡ್ಸ್ ಸಮಾರಂಭದಲ್ಲಿ ನಟಿ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ, ನಟ ಶಿವರಾಜ್ ಕುಮಾರ್ ಅವರನ್ನು ನೋಡಿದ ಕೂಡಲೇ ಎದ್ದು ನಿಂತು ಗೌರವ ಸೂಚಿಸಿದ್ದಾರೆ.. ನಂತರ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.. ಈ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.. ಐಶ್ವರ್ಯಾ ರೈ ತಮ್ಮ ಮಗಳಿಗೆ ಉತ್ತಮ ಸಂಸ್ಕಾರ ಹೇಳಿಕೊಟ್ಟಿದ್ದಾರೆ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
ಐಶ್ವರ್ಯಾ ರೈ ಅವರು ತಮ್ಮ ಮಗಳು ಆರಾಧ್ಯಾ ಜೊತೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.. ಕನ್ನಡದ ನಟಿ, ನಟಿಯರು ಕೂಡಾ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಸಮಾರಂಭದಲ್ಲಿ ಭಾಗವಹಿಸಿದ್ದರು.. ಇದೇ ವೇಳೆ ಶಿವರಾಜ್‌ಕುಮಾರ್ ಹಾಗೂ ವಿಕ್ರಂ ಭೇಟಿ ಆಗಿದ್ದು, ಈ ಸಂದರ್ಭದಲ್ಲಿ ಅಲ್ಲೇ ಇದ್ದ ಐಶ್ವರ್ಯಾ ರೈ ಅವರು ಶಿವರಾಜ್‌ಕುಮಾರ್ ಅವರನ್ನು ನೋಡುತ್ತಿದ್ದಂತೆ ಅಲ್ಲಿಗೆ ಬಂದಿದ್ದಾರೆ.. ಶಿವಣ್ಣನಿಗೆ ಶೇಕ್ಹ್ಯಾಂಡ್ ಮಾಡಿದ್ದು, ಅವರ ಜೊತೆಯಲ್ಲೇ ಇದ್ದ ಮಗಳಿಗೆ ಶಿವರಾಜ್‌ಕುಮಾರ್ ಅವರನ್ನು ಪರಿಚಯಿಸಿದ್ದಾರೆ.. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.