International

ಉಕ್ರೇನ್‌ ಅಧ್ಯಕ್ಷ ಜೆಲೆನ್‌ ಸ್ಕಿ ಕೊಲೆ ಮಾಡಲು 400ಮಂದಿ ಪ್ರತ್ಯೇಕ ಸೇನೆ ಕಳಿಸಿರುವ ಪುಟಿನ್..?

ರಷ್ಯಾ: ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಬರುವ ಅಡಚಣೆಯನ್ನು ತೊಡೆದುಹಾಕಲು ಏನು ಬೇಕಾದರೂ ಮಾಡಲು ಸಿದ್ಧರಾಗಿರುವಂತೆ ಕಂಡುಬರುತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಹತ್ಯೆಗೆ ಪುಟಿನ್ ಆದೇಶ ನೀಡಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ವರದಿಯ ಪ್ರಕಾರ, ವಿಶೇಷವಾಗಿ ತರಬೇತಿ ಪಡೆದ 400 ಕ್ಕೂ ಹೆಚ್ಚು ರಷ್ಯಾದ  ಸೈನಿಕರನ್ನು ಆಫ್ರಿಕಾದಿಂದ ಉಕ್ರೇನ್‌ಗೆ ಕಳುಹಿಸಲಾಗಿದೆಯಂತೆ. “ವ್ಯಾಗ್ನರ್ ಗ್ರೂಪ್” ಎಂದು ಕರೆಯಲ್ಪಡುವ ಖಾಸಗಿ ಸೇನೆಯು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಇತರ 23 ಸರ್ಕಾರಿ ಅಧಿಕಾರಿಗಳನ್ನು ಹತ್ಯೆ ಮಾಡಲು ತಯಾರಿ ನಡೆಸುತ್ತಿದೆ ಎಂದು  ವರದಿ ಮಾಡಿದೆ.

“ವ್ಯಾಗ್ನರ್ ಗ್ರೂಪ್” ಮಿಲಿಷಿಯಾವನ್ನು ಪುಟಿನ್ ಸಹಚರರು ನಡೆಸುತ್ತಿದ್ದರು ಎನ್ನಲಾಗಿದೆ. ಈ ವರ್ಷ ಜನವರಿಯಲ್ಲಿಯೇ 2,000 ರಿಂದ 4,000 ವಿಶೇಷ ಸೈನಿಕರು ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ಆಫ್ರಿಕಾದಿಂದ ಉಕ್ರೇನ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಕೆಲವರನ್ನು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ನ ಪೂರ್ವ ಪ್ರದೇಶಕ್ಕೆ,  400 ಮಂದಿಯನ್ನು ಬೆಲಾರಸ್ ಮೂಲಕ ಕೀವ್‌ಗೆ ಕಳುಹಿಸಲಾಯಿತು. ಝೆಲೆನ್ಸ್ಕಿ ಜೊತೆಗೆ, ಉಕ್ರೇನಿಯನ್ ಪ್ರಧಾನಿ ಡೆನಿಸ್ ಸ್ಮಿಹಾಲ್, ಕೈವ್ ಮೇಯರ್ ಮತ್ತು ಮಾಜಿ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಸೇರಿದಂತೆ 23 ಇತರ ಸರ್ಕಾರಿ ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ.

ರಷ್ಯಾದೊಂದಿಗೆ ಶಾಂತಿ ಮಾತುಕತೆ ಹಿನ್ನೆಲೆಯಲ್ಲಿ ಸೈನಿಕರು ಹಿಂದೆ ಸರಿದಿದ್ದು, ಮಾತುಕತೆಗೆ ಶರಣಾಗದಿದ್ದರೆ ತಮ್ಮ ಕೆಲಸ ಪೂರ್ಣಗೊಳಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಝೆಲೆನ್ಸ್ಕಿ ಬುಧವಾರ ಮತ್ತೊಮ್ಮೆ ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಹತ್ಯೆ ಮಾಡಲು ಸಂಚು ರೂಪಿಸಿರುವ ವಿಚಾರ ಆತಂಕ ಸೃಷ್ಟಿ ಮಾಡಿದೆ.

Share Post