ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ರಷ್ಯಾಗೆ ಮುಜುಗರ; ಸಭೆಯಿಂದ ಹೊರನಡೆದ ಎಲ್ಲಾ ರಾಜತಾಂತ್ರಿಕರು
ಜಿನಿವಾ: ಜಿನಿವಾದಲ್ಲಿ ನಡೆಯುತ್ತಿರುವ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ರಷ್ಯಾಗೆ ತೀವ್ರ ಮುಜುಗರವಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಿದ್ದ ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾರ್ವೋವ್ ಭಾಷಣ ಆರಂಭಿಸುತ್ತಿದ್ದಂತೆ, ಎಲ್ಲಾ ದೇಶಗಳ ರಾಜತಾಂತ್ರಿಕರೂ ಒಟ್ಟಿಗೆ ಎದ್ದು ಹೊರನಡೆದಿದ್ದಾರೆ. ಇದರಿಂದಾಗಿ ರಷ್ಯಾ ವಿದೇಶಾಂಗ ಸಚಿವರು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ರಷ್ಯಾ ಮಿಲಿಟರಿ ಪಡೆ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳ ರಾಜತಾಂತ್ರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿಯೇ ರಷ್ಯಾ ವಿದೇಶಾಂಗ ಸಚಿವರ ಭಾಷಣ ಕೇಳದೆ ಹೊರನಡೆದಿದದಾರೆ.