ಅಮೆರಿಕ ಸರ್ಕಾರದಲ್ಲಿ ಪ್ರಧಾನ ವಕೀಲ ಸ್ಥಾನ ಪಡೆದ ಭಾರತದ ಅಂಜಲಿ
ವಾಷಿಂಗ್ಟನ್; ಭಾರತೀಯ-ಅಮೆರಿಕದ ಕಾನೂನು ತಜ್ಞೆ ಅಂಜಲಿ ಚತುರ್ವೇದಿ ಅವರನ್ನು ಅಮೆರಿಕದ ಹಿರಿಯ ನಾಗರಿಕರ ಆರೋಗ್ಯ ಸೇವಾ ಇಲಾಖೆಯ ಪ್ರಧಾನ ವಕೀಲರನ್ನಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಂಜಲಿ ಅವರು ಸದ್ಯ ಅಮೆರಿಕದ ನ್ಯಾಯ ಇಲಾಖೆಯ ಅಪರಾಧ ವಿಭಾಗದಲ್ಲಿ ಉಪ ಸಹಾಯಕ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಇದೀಗ ಅವರು ಅಮೆರಿಕದ ಹಿರಿಯ ನಾಗರಿಕರ ಆರೋಗ್ಯ ಸೇವೆ ಇಲಾಖೆಯ ಪ್ರಧಾನ ವಕೀಲರಾಗಿ ನಾಮ ನಿರ್ದೇಶನಗೊಂಡಿದ್ದಾರೆ.
ಹಿರಿಯ ನಾಗರಿಕರಿಗೆ ವಿಶ್ವ ಗುಣಮಟ್ಟದ ಸೌಲಭ್ಯಗಳು, ಸೇವೆಗಳನ್ನು ನೀಡುವುದು ಈ ಇಲಾಖೆಯ ಕೆಲಸವಾಗಿದೆ. ಸಹಾನುಭೂತಿ, ಬದ್ಧತೆ, ಉತ್ಕೃಷ್ಟತೆ, ವೃತ್ತಿಪರತೆ, ಸಮಗ್ರತೆ, ಹೊಣೆಗಾರಿಕೆ ಮತ್ತು ಉಸ್ತುವಾರಿಗಳ ಅತ್ಯುನ್ನತ ಮಾನದಂಡಗಳನ್ನು ಅನುಸರಿಸುತ್ತದೆ. ಇದರೊಂದಿಗೆ ಅಧ್ಯಕ್ಷ ಬೈಡನ್ ಸರ್ಕಾರದಲ್ಲಿ ಭಾರತೀಯ ಮೂಲದ ನಾಲ್ವರು ಭಾರತೀಯ ಸಂಜಾತರು ಉನ್ನತ ಹುದ್ದೆಗಳನ್ನು ಪಡೆದಂತಾಗಿದೆ.