International

ಪ್ರಧಾನಿ ಮೋದಿಗೆ ʻಆರ್ಡರ್‌ ಆಫ್‌ ದಿ ನೈಲ್‌ʼ ಪ್ರತಿಷ್ಠಿಯ ಪ್ರಶಸ್ತಿ ಪ್ರದಾನ

ಕೈರೋ; ಅಮೆರಿಕ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿಯವರು ಈಜಿಪ್ಟ್‌ಗೆ ಹೋಗಿದ್ದಾರೆ. ಈಜಿಪ್ಟ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ ಸಿಕ್ಕಿದೆ. ಮೋದಿ ಈಜಿಪ್ಟ್‌ ಸರ್ಕಾರ ಆರ್ಡರ್‌ ಆಫ್‌ ದಿ ನೈಲ್‌ ಎಂಬ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದೆ.

ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌-ಸಿಸಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಮೋದಿಯವರು ಪ್ರಧಾನಿಯಾದ ಮೇಲೆ ಪ್ರಪಂಚದ ವಿವಿಧ ದೇಶಗಳು ನೀಡಿರುವ 13ನೇ ಪ್ರಶಸ್ತಿ ಇದಾಗಿದೆ.

ಈಜಿಪ್ಟ್‌ನಲ್ಲಿ ನೈಲ್‌ ನದಿ ಪ್ರಮುಖವಾದುದು. ಹೀಗಾಗಿ ಈ ಪ್ರಶಸ್ತಿಗೆ ಆರ್ಡರ್‌ ಆಫ್‌ ದಿ ನೈಲ್‌ ಎಂದು ಹೆಸರಿಡಲಾಗಿದೆ. ಈ ಪ್ರಶಸ್ತಿಯು 3 ಚದರ ಯುನಿಟ್‌ಗಳನ್ನೊಳಗೊಂಡ ಶುದ್ಧ ಚಿನ್ನದ ಮಾಲೆಯಾಗಿದೆ.

 

Share Post